ಬೆಂಗಳೂರು, ಜೂನ್ 14, 2019 (www.justkannada.in): ನಟ ಯಶ್ಬಾಡಿಗೆ ಮನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ಹಂತವಾಗಿ ಯಶ್ ತಾಯಿ ಹಾಗೂ ಮತ್ತಿತರರಿಗೆ ಗಿರಿನಗರ ಠಾಣಾ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಇತ್ತೀಚೆಗೆ ಹೈಕೋರ್ಟ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಜೂನ್ 7ರಂದು ಯಶ್ ಕುಟುಂಬ ಈ ಹಿಂದೆ ವಾಸವಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿತ್ತು. ಆದ್ರೆ, ಈ ವೇಳೆ ಸುಮಾರು 28 ಲಕ್ಷ ರೂ. ಮೌಲ್ಯದ ಮನೆಯ ವಸ್ತುಗಳು ಡ್ಯಾಮೇಜ್ ಆಗಿತ್ತು.
ಮನೆ ಮಾಲೀಕರಾದ ಡಾ.ವನಜಾ ಅವರು ಇದು ಯಶ್ ತಾಯಿ ಪುಷ್ಪ ನಡೆಸಿದ ಕೃತ್ಯ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಗಿರಿನಗರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.