ಬೆಂಗಳೂರು, ಜ.27, 2020 : (www.justkannada.in news) : ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ವರ್ಷದ ವ್ಯಕ್ತಿ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಯುಗದ ಸಾಧಕ ಪ್ರಶಸ್ತಿಗೆ ಕನ್ನಡ ನಿಘಂಟು ತಜ್ಞರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ನಾಳೆ (ಜ.28 ರಂದು ) ಸಂಜೆ 5 ಗಂಟೆಗೆ ಬೆಂಗಳೂರು ಅರಮನೆ ಮೈದಾನದ ಆವರಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು.
ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ :
ಈ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಎಂ.ಸಿದ್ದರಾಜು, ಸುನೀಲ್ ಪ್ರಸಾದ್, ಕೆ.ಎಚ್.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ.ಭಟ್, ಕೆ.ಎನ್.ಚೆನ್ನೇಗೌಡ, ಹರಿಶ್ಚಂದ್ರ ಭಟ್, ಅಬ್ದುಲ್ ಹಮೀದ್ ಪಾಳ್ಯ, ಇಮ್ರಾನ್ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣಕೊಡಸೆ, ಜೋಸೆಫ್ ಹೂವರ್, ಎನ್.ಎಸ್.ಶಂಕರ್, ಡಾ.ಬಿ.ಕೆ.ರವಿ, ರು.ಬಸಪ್ಪ, ಜಯಪ್ರಕಾಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ , ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ, ಶಾಸಕ ಗೋವಿಂದರಾಜು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್, ಶೈಕ್ಷಣಿಕ ಸುಧಾರಣಾ ಸಲಹೆಗಾರ ಡಾ. ದೊರೆಸ್ವಾಮಿ ಭಾಗವಹಿಸುವರು.
ಆಕರ್ಷಣೆ :
ಇದೊಂದು ಅಪರೂಪದ ತ್ರಿ-ಇನ್ ಒನ್ ಸಮಾರಂಭ. ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಯುಗದ ಸಾಧಕ ಪ್ರಶಸ್ತಿ ಸಮಾರಂಭದ ಜತೆಗೆ ಪ್ರೆಸ್ ಕ್ಲಬ್ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಸಹ ಇದೇ ವೇಳೆ ಆಯೋಜಿಸಲಾಗಿದೆ.
ಈ 50 ರ ಸಂಭ್ರಮಕ್ಕೆ ಸಾಕ್ಷಿಯಾಗಿ 50 ಪತ್ರಕರ್ತರಿಗೆ ಗೌರವ, ಸದಸ್ಯರ ಮಕ್ಕಳಿಗೆ ಸ್ಕಾಲರ್ ಶಿಪ್ ವಿತರಣೆ ಹಾಗೂ ಖಾಸಗಿ ವಾಹಿನಿ ಸಹಯೋಗದಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.
key words : bangalore-press.club-journalist-award-function-pcb