ಹಿರಿಯ ಪತ್ರಕರ್ತ ರಾಜಶೇಖರ ಕೋಟಿಯವರ ಹೆಸರಿನಲ್ಲಿ ಪ್ರಶಸ್ತಿ: ಶಿವಾನಂದ ತಗಡೂರು

 

ಬೆಂಗಳೂರು. ಜು.01, 2020 : (www.justkannada.in news) ಹಿರಿಯ ಪತ್ರಕರ್ತ , ಮೈಸೂರು ಆಂದೋಲನ ದಿನಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಅವರ ಹೆಸರಿನಲ್ಲಿ ಒಂದು ಲಕ್ಷ ರೂಗಳ ದತ್ತಿನಿಧಿ ಸ್ಥಾಪಿಸಲಾಗುವುದು. ಅವರ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿಭಾನ್ವಿತ ಒಬ್ಬ ಪತ್ರಕರ್ತರಿಗೆ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

bangalore-press-day-rajashekar-koti-award-kuwj

ಬೆಂಗಳೂರಿನ ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸರಳವಾಗಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಡಿವಿಜಿ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೈಸೂರು ಪತ್ರಕರ್ತರ ಸಂಘದ ಸಹಕಾರದಿಂದ ಈ ದತ್ತಿನಿಧಿ ಸ್ಥಾಪಿಸಲಾಗುವುದು ಎಂದರು.

ಜುಲೈ 1 ಪತ್ರಕರ್ತರಿಗೆ ತುಂಬಾ ಮಹತ್ವದ ದಿನವಾಗಿದೆ.

ಮಂಗಳೂರಿನ ಕ್ರಿಶ್ಚಿಯನ್‌ ಪಾದ್ರಿ ಹರ್ಮನ್ ಮೊಂಗ್ಲಿನ್ ಪ್ರಾರಂಭಿಸಿದ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡದ ಮೊದಲ ಪತ್ರಿಕೆಯಾಗಿದ್ದು, ಪತ್ರಿಕೋದ್ಯಮ ಇತಿಹಾಸದ ಮೈಲುಗಲ್ಲಾಗಿದೆ ಎಂದರು.

bangalore-press-day-rajashekar-koti-award-kuwj

ಕೆಯುಡಬ್ಲ್ಯೂಜೆ
ರಾಜ್ಯದಾದ್ಯಂತ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಜುಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆ ಯನ್ನು ಆಚರಿಸುವ ಮೂಲಕ ವೃತ್ತಿ ಗೌರವ ಹೆಚ್ಚಿಸುವ ಕಾರ್ಯಕ್ರಮ ಸಂಘಟಿಸುತ್ತಿದೆ ಎಂದರು.

ರಾಜ್ಯದ ಪತ್ರಕರ್ತರ ಹಿತಕಾಯುವಲ್ಲಿ ಕೆಯುಡ್ಲ್ಯೂಜೆ ಸಂಘಟನೆ ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತದೆ ಪತ್ರಕರ್ತರು‌ ಪತ್ರಿಕಾ ಧರ್ಮಪಾಲಿಸಿ ವೃತ್ತಿಯ ಘನತೆ ಕಾಪಾಡುವ ಮೂಲಕ ತಮಗೆ ಗೌರವ ತರುವ ಕೆಲಸ‌ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಚಲುವರಾಜು ಪತ್ರಿಕಾ ದಿನಾಚರಣೆ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ಮತ್ತಿಕೆರೆ ಜಯರಾಮ್ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಬೆಂಗಳೂರು ನಗರ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಗಾಂಧಿ, ಕಾರ್ಯದರ್ಶಿ ದೇವರಾಜು, ಮತ್ತು ರಾಜ್ಯದಾದ್ಯಂತ ಆಗಮಿಸಿದ್ದ ಜಿಲ್ಲಾ ಸಂಘದ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು ಮತ್ತಿತರೆ ಪದಾಧಿಕಾರಿಗಳು ಭಾಗವಹಿಸಿದ್ದರು.

oooo

key words : bangalore-press-day-rajashekar-koti-award-kuwj