ಬೆಂಗಳೂರಿನ ಶಿವಾನಂದ ವೃತ್ತದ ಫ್ಲೈ ಓವರ್‌ನಿಂದಾಗಿ ‘ ಕುಮಾರ ಪಾರ್ಕ್’ ಉಳಿವಿಗೆ ಬಂದಿದೆ ಕುತ್ತು.

 

ಬೆಂಗಳೂರು, ಜೂನ್ ೧೯, ೨೦೨೧ (www.justkannada.in): ನಗರದ ಹೃದಯಭಾಗದಲ್ಲಿರುವಂತಹ ಕುಮಾರ ಪಾರ್ಕ್ನ ಬಿದಿರಿನ ತೋಪಿಗೆ, ವಿವಾದಾತ್ಮಕ ಶಿವಾನಂದ ವೃತ್ತದ ಫ್ಲೈ ಓವರ್‌ನಿಂದಾಗಿ ಕುತ್ತು ಬಂದಿದ್ದು, ಕುಂಟುತ್ತಾ ನಡೆದಿರುವ ಫ್ಲೈ ಓವರ್ ನಿರ್ಮಾಣದಿಂದಾಗಿ ಸುತ್ತಲಿನ ನಿವಾಸಿಗಳಿಗೆ ಆಘಾತ ಎದುರಾಗಿದೆ.

ಕುಮಾರ ಪಾರ್ಕ್ನ ಬಳಿಯಲ್ಲೇ ವಾವಾಗಿರುವಂತಹ ಭಗವಾನ್‌ದಾಸ್ ರಾವ್ ಎಂಬುವವರ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಾರ್ಮಿಕರು ಕುಮಾರ ಪಾರ್ಕ್ನ ಬೇಲಿಯನ್ನು ಕೆಡವಿ, ಪಾರ್ಕ್ ಒಳಗಿರುವಂತಹ ಬಿದಿರಿನ ತೋಪಿನ ಅನೇಕ ಮರಗಳನ್ನು ಕಡಿತಗೊಳಿಸಿದ್ದಾರೆ. “ಈ ಕುರಿತು ಇಲ್ಲಿನ ನಿವಾಸಿಗಳಿಗೆ ಮುಂಚಿತವಾಗಿ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಅಥವಾ ಸಾರ್ವಜನಿಕರೊಂದಿಗೆ ಸಮಾಲೋಚನೆಯೂ ಮಾಡಿಲ್ಲ,” ಎನ್ನುತ್ತಾರೆ ರಾವ್.

jk

ಕುಮಾರ ಪಾಕ್ ಈ ಸುತ್ತಮುತ್ತಲಿನ ಪ್ರದೇಶಗಳಿಗೆ ಆಮ್ಲಜನಕವನ್ನು ಒದಗಿಸುವ ಅತ್ಯಂತ ಪ್ರಮುಖ ಸ್ಥಳವಾಗಿದ್ದು, ಅನೇಕರು ಇಲ್ಲಿಗೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಹಕ್ಕೆ ಬಂದು ತಾಜಾ ಗಾಳಿಯನ್ನು ಆಸ್ವಾದಿಸಲು ಬರುವುದು ವಾಡಿಕೆಯಾಗಿದೆ.

ಶಿವಾನಂದ ವೃತ್ತದ ಫ್ಲೈ ಓವರ್ ಕಾಮಗಾರಿ ಆರಂಭವಾಗದಾಗಿನಿಂದಲೂ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಸುತ್ತಲಿನ ನಿವಾಸಿಗಳು ಹಾಗೂ ಪರಿಸರವಾದಿಗಳ ಕಠಿಣ ವಿರೋಧದ ನಡುವೆಯೂ ಸಹ ರಾಜ್ಯ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿದೆ. ಇಲ್ಲಿ ಫ್ಲೈ ಓವರ್ ನಿರ್ಮಾಣದಿಂದ ವಾಹನ ಸಂಚಾರದ ಸಮಸ್ಯೆ ಬಗೆಹರಿಯುವುದು ಬಹಳ ಕಡಿಮೆ ಎನ್ನುವುದು ಈ ಯೋಜನೆಯ ವಿರೋಧಿಗಳ ಅಭಿಪ್ರಾಯ.
ಏಕೆಂದರೆ, ಇಲ್ಲಿರುವ ದೊಡ್ಡ ಸಮಸ್ಯೆ ಏನೆಂದರೆ ಸಣ್ಣ ರೈಲ್ವೆ ಕೆಳಸೇತುವೆ. ಫ್ಲೈ ಓವರ್ ನಿರ್ಮಾಣದಿಂದ ಎದುರಾಗುವ ವಾಹನ ದಟ್ಟಣೆ ಸೇತುವೆಯ ಬಳಿ ಬಂದು ಸೇರಿ ಇನ್ನೂ ಹೆಚ್ಚಿನ ದಟ್ಟಣೆಗೆ ಕಾರಣವಾಗುತ್ತದೆ. ಮೇಲಾಗಿ ಲೋಹದ ಫ್ಲೈ ಓವರ್ ನಿರ್ಮಾಣದಿಂದಾಗಿ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, ಈಗ ತಕ್ಕಮಟ್ಟಿಗೆ ತಂಪಾಗಿರುವ ಸುತ್ತಮುತ್ತಲಿನ ಪ್ರದೇಶಕ್ಕೆ ತೊಂದರೆ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

bangalore- KR Market -Fly Over –work -One way- traffic -bandh

ಆದರೆ ಸರ್ಕಾರ ಇದ್ಯಾವುದಕ್ಕೂ ಸೊಪ್ಪು ಹಾಕದೆ ಈ ಯೋಜನೆಯನ್ನು ಮುಂದುವರೆಸಿದೆ. ಇದರಿಂದಾಗಿ ಹರೇಕೃಷ್ಣ ರಸ್ತೆಗೆ ನೆರಳನ್ನು ಒದಗಿಸುತ್ತಿದ್ದಂತಹ ಅನೇಕ ಹಳೆ ಮರಗಳನ್ನು ಕಡಿಯಾಗಿದೆ. ಫ್ಲೈ ಓವರ್ ನಿರ್ಮಾಣ ಈಗಾಗಲೇ ಅನೇಕ ಬಾರಿ ಅಂತಿಮ ದಿನಾಂಕದ ಅವಧಿಯನ್ನು ಮೀರಿದ್ದು, ವಾಹನ ಸಂಚಾರದ ಪರಿಸ್ಥಿತಿ ಹದಗೆಟ್ಟಿದ್ದು, ಸುತ್ತಲಿನ ನಿವಾಸಿಗಳ ನಿದ್ದೆ ಗೆಡಿಸಿದೆ.

ಕಳೆದ ವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ಪಾರ್ಕ್ಗೆ ಹೊಸ ಡೆಡ್‌ಲೈನ್ ನೀಡಿ, ನಿರ್ಮಾಣ ಕಾಮಗಾರಿಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ೪೫ ದಿನಗಳ ಗಡುವು ಕೋರಿ, ಜುಲೈ ತಿಂಗಳ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದರು.

ಕುಮಾರ್ ಪಾರ್ಕ್ಗೆ ಅನೇಕ ವರ್ಷಗಳಿಂದ ಭೇಟಿ ನೀಡುತ್ತಿರುವ ವಿಹಾರಿಗಳು “ನಾವು ಈಗಾಗಲೇ ಈ ಯೋಜನೆಯಿಂದಾಗಿ ಅನೇಕ ಮರಗಳನ್ನು ಕಳೆದುಕೊಂಡಿದ್ದೇವೆ. ಮೇಲಾಗಿ ಈ ಪಾರ್ಕ್ನ ಎಷ್ಟು ಭಾಗ ಉಳಿಯುತ್ತದೋ ಎನ್ನುವುದು ಗೊತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : bangalore-shivananda-circle-fly.over-kumarakrupa-park-danger