ನವದೆಹಲಿ,ಫೆ,1,2020(www.justkannada.in): ಸಿಲಿಕಾನ್ ಸಿಟಿ ಬೆಂಗಳೂರಿಗರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರದಿಂದ ಶೆ.60ರಷ್ಟು ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿದ್ದು, ಬೆಂಗಳೂರು ಸಬ್ ಅರ್ಬನ್ ರೈಲು ರೈಲು ಯೋಜನೆಗೆ ಶೇ60 ರಷ್ಟು ಕೇಂದ್ರದಿಂದ ಅನುದಾನ ಸಿಗಲಿದೆ ಎಂದು ಹೇಳಿದ್ದಾರೆ.
ಸೀತಾರಾಮನ್ ಅವರು ಸಂಸತ್ತಿನಲ್ಲಿ ತಮ್ಮ ಬಜೆಟ್ ಮಂಡನೆ ವೇಳೇಯಲ್ಲಿ ಹೇಳಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತ ಒಟ್ಟು 18,600 ಕೋಟಿ ಯೋಜನೆ ಇದ್ದಾಗಿದೆ ಅಂತ ಹೇಳಿದರು. ಮೆಟ್ರೊ ಮಾದರಿಯಲ್ಲಿ ರೂ18,600 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ಆರಂಭವಾಗಲಿದ್ದು, ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ 2023ಕ್ಕೆ ಮುಕ್ತಾಯವಾಗಲಿದೆ. ರೈಲು ಹಳಿಗಳ ಬದಿಯಲ್ಲಿ ದೊಡ್ಡ ಮಟ್ಟದ ಸೋಲಾರ್ ಪವರ್ ಘಟಕಗಳ ಸ್ಥಾಪನೆಗೆ ಕ್ರಮ. 150ಕ್ಕೂ ಹೆಚ್ಚು ಖಾಸಗಿ ಸಹಭಾಗಿತ್ವದ ರೈಲುಗಳ ಆರಂಭ. ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ರೂ 23 ಸಾವಿರ ಕೋಟಿ ಘೋಷಣೆ ಮಾಡಿದರು.
ಭಾರತೀಯ ರೈಲ್ವೇ ಇಲಾಖೆಗೆ 05 ಕ್ರಮಗಳ ಘೋಷಣೆ, ಭಾರತೀಯ ರೈಲ್ವೇಯಲ್ಲಿ ಸೌರ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಉಡಾನ್ ಯೋಜನೆಯಡಿಯಲ್ಲಿ 2024ರೊಳಗೆ 100 ವಿಮಾನ ನಿಲ್ದಾಣಗಳ ಸ್ಥಾಪನೆ. 27ಸಾವಿರ ಕಿಲೋಮೀಟರ್ ಹಳಿಗಳ ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Key words: Bangalore -Suburban Rail- Project – 60 per cent -grant –Center-Budget