ಬೆಂಗಳೂರು,ನವೆಂಬರ್,20,2020(www.justkannada.in): ಇದೇ ಮೊದಲ ಸಲ ವರ್ಚ್ಯುಯಲ್ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಮೇಳ-2020’ ಕ್ಕೆ ಮೊದಲ ದಿನವಾದ ಗುರುವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.
ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ ಮಾಡಿ ಪಾಲ್ಗೊಂಡರು. ಇದಲ್ಲದೇ ಇತರ 10,000 ಜನರು ಇದೇ ವೇದಿಕೆ ಮೂಲಕ ಆಸಕ್ತಿಯಿಂದ ಭಾಗವಹಿಸಿದರು. ಒಟ್ಟಾರೆ ಈ ವೇದಿಕೆ ಮೂಲಕ ಪಾಲ್ಗೊಂಡವರ ಸಂಖ್ಯೆ 17,000 ದಾಟಿದೆ. ಕಳೆದ ವರ್ಷ ಮೂರು ದಿನಗಳೂ ಸೇರಿ ಪಾಲ್ಗೊಂಡ ವ್ಯಾಪಾರೋದ್ಯಮಿಗಳ ಸಂಖ್ಯೆ 3,000 ಇತ್ತು.
ಇದಲ್ಲದೇ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ 2 ಕೋಟಿಗೂ ಹೆಚ್ಚು ಜನರನ್ನು ಇದು ತಲುಪಿದೆ, ಟಿ.ವಿ. ವಾಹಿನಿಗಳ ಮೂಲಕ ವೀಕ್ಷಿಸಿದವರ ಸಂಖ್ಯೆಯೂ ದೊಡ್ಡದಿದೆ. ಹೀಗಾಗಿ ಒಟ್ಟಾರೆ ದೇಶ-ವಿದೇಶಗಳ ಕೋಟ್ಯಂತರ ಜನರು ಅತ್ಯಧಿಕ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ.
English summary….
Bengaluru Tech Summit-2020: Virtual mela receives overwhelming response
Bengaluru, Nov. 20, 2020 (www.justkannada.in): The virtual mela held as part of the ‘Bengaluru Technology Mela-2020 which was held for the first time on Thursday received overwhelming response.
About 7000 traders had registered on BTS-2020 online platform alone. Apart from it, 10,000 others also took part through directly through the same platform. Thus, the total number of people who took part in the virtual mela was above 17,000, The total number of traders who participated in the three days programme last year was only 3,000.
Above this the tech meet has been viewed by more than 2 crore people through social media and the number of viewers on TV and other media is also bigger.
Keywords: Bengalutu Tech Summit 2020/ virtual mela
Key words: Bangalore Tech Summit-2020-Virtual Fair – expectation- Responsiveness