ಬೆಂಗಳೂರು, ಅ.31, 2020 : (www.justkannada.in news) ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪತ್ರಕರ್ತೆಯ ಮಹತ್ವದ ಪಾತ್ರದ ಬಗ್ಗೆ ಸಿಬಿಐ ಮಾಹಿತಿ ಸಂಗ್ರಹಿಸಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಭಾಸ್ಕರ್ ರಾವ್ ಕೇಂದ್ರಿಕೃತ ಎನ್ನಲಾದ ಈ ಹಗರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಆಂಗ್ಲ ಪತ್ರಿಕೆ ‘ಬೆಂಗಳೂರು ಮಿರರ್ ‘ ವಿಶೇಷ ಸುದ್ಧಿ ಪ್ರಕಟಿಸಿದ್ದು, ಈ ನ್ಯೂಸ್ ನಲ್ಲಿ ಮಹಿಳಾ ಪತ್ರಕರ್ತೆಯ ಪಾತ್ರ ಉಲ್ಲೇಖಿಸಲಾಗಿದೆ.
ಟೆಲಿಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಬೆಂಗಳೂರಿನ ಈ ಮಹಿಳಾ ಪತ್ರಕರ್ತೆ, ಸಕ್ರೀಯವಾಗಿ ಭಾಗಿಯಾಗಿರುವ ಬಗ್ಗೆ ಸಿಬಿಐ ಮಾಹಿತಿ ಕಲೆ ಹಾಕಿದೆ. ಈ ಸಲುವಾಗಿ ಮಹಿಳಾ ಪತ್ರಕರ್ತೆಯನ್ನು ಸಿಬಿಐ ಹಲವು ಬಾರಿ ವಿಚಾರಣೆಗೊಳಪಡಿಸಿದೆ ಎಂದು ಸಹ ಪತ್ರಿಕೆ ವರದಿ ಮಾಡಿದೆ.
key words : bangalore-telephone-tapping-cbi-lady-journalist
CBI CHARGE SHEET IN LAST YEAR’S PHONE TAP CASE IS READY; FEMALE JOURNALIST, UNNAMED IPS OFFICER FIND MENTION TOO
The sensational phone tapping case involving a former police commissioner is inching towards its logical conclusion with the Central Bureau of Investigation (CBI) having readied the charge sheet. CBI’s Anti-Corruption-I unit of the headquarter zone in New Delhi will soon file the chargesheet with a special CBI court in Bengaluru.
According to the CBI’s investigations and the subsequent charge sheet, former Bengaluru police commissioner Alok Kumar ordered illegal phone interceptions of several opposition and ruling party leaders, their relatives and public servants, including bureaucrats and IPS officers, during the previous Congress-JD(S) coalition government in the state.