Bangalore university:  ಅನಂತ್ ನಾಗ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್.

ಬೆಂಗಳೂರು,ಜುಲೈ,14,2022(www.justkannada.in):  ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಚಿತ್ರನಟ ಅನಂತ್ ನಾಗ್, ಹೆಸರಾಂತ ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಶರತ್ ಶರ್ಮ ಅವರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಿಂದ ಡಿ ಲಿಟ್ ಪದವಿ ನೀಡಲು ನಿರ್ಧರಿಸಲಾಗಿದೆ.

ಕೋಲಾರದ ನಂದಿನಿ ಪ್ಯಾಲೇಸ್‌ ನಲ್ಲಿ ಶುಕ್ರವಾರ ನಡೆಯಲಿರುವ ವಿ.ವಿಯ ಘಟಿಕೋತ್ವವ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.

ಇದು ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವವಾಗಿದ್ದು, ವಿವಿಧ ವಿಷಯಗಳಲ್ಲಿ ಮೊದಲ ರ್ಯಾಂಕ್ ಪಡೆದಿರುವ 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ, ಹಿಂದಿ, ಮರಾಠಿ, ಮಲೆಯಾಳಿ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ ಕೆಲವೇ ಕೆಲವು ನಟರಲ್ಲಿ ಅನಂತ್ ನಾಗ್ ಕೂಡ ಒಬ್ಬರು. ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಹಿರಿಯ ನಟ ಅನಂತ್ ನಾಗ್ ಅವರಿಗೆ ವಿಶ್ವವಿದ್ಯಾಲಯವು ಡಿ.ಲಿಟರೇಚರ್ ಪದವಿ ನೀಡಲು ತೀರ್ಮಾನಿಸಿದೆ.

ಇನ್ನು ಹೆಸರಾಂತ ಶಾಹನಾಯ್ ವಾದಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್ ಬಲ್ಲೇಶ್ ಭಜಂತ್ರಿ ಅವರು ಸಂಗೀತ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಗುರುತಿಸಿ ವಿ.ವಿಯು ದಿ..ಲಿಟರೇಚರ್ ಪದವಿ ನೀಡಿ ಗೌರವಿಸಲಿದೆ. ಎಸ್ ಬಲ್ಲೇಶ್ ಭಜಂತ್ರಿ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಶಾಹನ್ ವಾಯ್ ವಾದಕರಾದ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯರು ಕೂಡ ಹೌದು. ಸುಮಾರು ನಾಲ್ಕು ದಶಕಗಳ ಕಾಲ ಬಿಸ್ಮಿಲ್ಲಾ ಖಾನ್ ಅವರ ಜೊತೆ ಶಹನ್ ವಾಯ್ ನುಡಿಸಿರುವ ಹೆಗ್ಗಳಿಕೆ ಬಜಂತ್ರಿ ಅವರಿಗೆ ಸಲ್ಲುತ್ತದೆ.

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ಬೆಂಗಳೂರಿನ ಶರತ್ ಶರ್ಮ ಅವರು ಕೂಡ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ.

ದೇಶದೆಲ್ಲೆಡೆ ಇಂದು ಮನೆಮತರಾಗಿರುವ ಡಿಜಿಟಲ್ ಪೇಮೆಂಟ್ ನ ಹಿಂದಿನ ರೂವಾರಿಯೇ ಶರತ್ ಶರ್ಮ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುಪಿಐ ಡಿಜಿಟಲ್ ಪೇಮೆಂಟ್ ನ ಸೂತ್ರದಾರಿ ಇವರೇ ಎನ್ನುವುದು ವಿಶೇಷ. ಭಾರತ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಯಶೋಗಾಧೆಯನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕೊಂಡಾಡಿದ್ದರು. ಇವರು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಶರತ್ ಶರ್ಮ ಅವರನ್ನು ವಿಜ್ಞಾನ ಪಡೆ ಸದಸ್ಯರನ್ನಾಗಿ ನೇಮಕ ಮಾಡಿತ್ತು.

Key words: Bangalore University- Honorary- doctorates – three – Anant Nag.