ಬೆಂಗಳೂರು,ಜು,21,2020(www.justkannada.in): ನಾಳೆಯಿಂದ ಬೆಂಗಳೂರು ಅನ್ ಲಾಕ್ ಆಗಲಿದ್ದು ಲಾಕ್ ಡೌನ್ ಇರುವುದಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಿಸಲು ಒಂದು ವಾರ ಲಾಕ್ ಡೌನ್ ಮಾಡಲಾಗಿದೆ. ನಾಳೆಗೆ ಲಾಕ್ ಡೌನ್ ಮುಗಿಯಲಿದ್ದು ಈ ಹಿನ್ನೆಲೆ ಲಾಕ್ ಡೌನ್ ಮತ್ತೆ ಮುಂದುವರೆಯುತ್ತದೆಯೇ ಎಂಬ ಗೊಂದಲ ಉಂಟಾಗಿದೆ.
ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, ನಾಳೆಯಿಂದ ಬೆಂಗಳೂರು ಅನ್ ಲಾಕ್ ಆಗಲಿದ್ದು, ಮಾಲ್ ಗಳು, ದೇಗುಲ, ಹೋಟೆಲ್ ಗಳು ಓಪನ್ ಮಾಡಬಹುದು. ಜನ ಸಂದಣಿ ಇರುವ ಮಾರ್ಕೆಟ್ ಮಾತ್ರ ಬಂದ್ ಮಾಡಲಾಗುತ್ತದೆ. ರಸ್ತೆ ಬದಿ ವ್ಯಾಪಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಸಿನಿಮಾ, ಜಿಮ್, ಸ್ವಿಮ್ಮಿಂಗ್ ಫೂಲ್ ಗೆ ಅವಕಾಶವಿಲ್ಲ. ಶಾಲಾಕಾಲೇಜುಗಳು ಕಂಪ್ಲೀಟ್ ಬಂದ್ ಆಗಿರುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
Key words: Bangalore- Unlock – DCM -Ashwath Narayan