ಬೆಂಗಳೂರು, ಜು.13, 2020 : (www.justkannada.in news ) ಕರ್ನಾಟಕದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ದಿನ ಇಂದು.
1951 ರ ಜುಲೈ 13ರಂದು ( 70 ವರ್ಷಗಳ ಹಿಂದೆ ) ಭಾರತದ ಅಂದಿನ ಪ್ರಧಾನಿ ಪಂಡಿತ್ ಜವಹಾರ ಲಾಲ್ ನೆಹರೂ ಮತ್ತು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ ಸಿ ರೆಡ್ಡಿಯವರು ಈ ಶಕ್ತಿಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಆಮೂಲಕ ಈ ಭವ್ಯವಾದ ಆಡಳಿತ ಕೇಂದ್ರದ ನಿರ್ಮಾಣಕ್ಕೆ ಕಾರಣಕರ್ತರಾದರು.
ವಿಶ್ವದಲ್ಲಿರುವ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ಹೋಲಿಸಿದರೆ ತನ್ನದೇ ಆದ ಛಾಪು ಮೂಡಿಸಿರುವ ವಿಶಿಷ್ಟತೆ ನಮ್ಮ ಈ ವಿಧಾನಸೌಧಕ್ಕಿದೆ. ಪ್ರಪಂಚದ ಪ್ರಪ್ರಥಮ ಸಾಂವಿಧಾನಿಕ ಸಂಸ್ಥೆಗಳ ಚೌಕಟ್ಟು ( World’s first Constitutional Complex ) ನಮ್ಮ ಕಾರ್ಯಕ್ಷೇತ್ರವಾದ ವಿಧಾನಸೌಧ ಎಂಬುದು ಹೆಮ್ಮೆಯ ಸಂಗತಿ.
key words : Bangalore-vidhanasoudha-foundation-ceremony-1950