ಬೆಂಗಳೂರು,ನವೆಂಬರ್,18,2022(www.justkannada.in): ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದವರನ್ನ ನಾಳೆ ಮಧ್ಯಾಹ್ನದೊಳಗೆ ಬಂಧಿಸಬೇಕು. ಅಕ್ರಮವೆಸಗಿದ ಎಲ್ಲಾ ಅಧಿಕಾರಿಗಳನ್ನೂ ಬಂಧಿಸಬೇಕು ಎಂದು ಸರ್ಕಾರಕ್ಎಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಡುವು ನೀಡಿದರು.
ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಮತದಾರರ ಪಟ್ಟಿ ಅಕ್ರಮ ಬಗ್ಗೆ ಸಿಎಂ ಲಘುವಾಗಿ ಮಾತನಾಡಿದ್ದಾರೆ. ಸಿಎಂ ಉಡಾಫೆ ಆಗಿ ಮಾತನಾಡೋದು ಸರಿಯಲ್ಲ. ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಡಿಲಿಟ್ ಆಗಿದೆ ತನಿಖೆಯಾಗಲಿ. ಜೆಡಿಎಸ್ ರೈತ ಸಂಘ ಎಲ್ಲರಿಗೂ ಹೇಳುತ್ತಿದ್ದೇನೆ ನಿಮ್ಮ ನಿಮ್ಮ ಮತದಾರರ ಪಟ್ಟಿ ಬಗ್ಗೆ ಎಚ್ಚರ ವಹಿಸಿ. ಈ ಹಗರಣದಿಂದ ರಾಜ್ಯದ ಮರ್ಯಾದೆ ಹೋಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಇದನ್ನ ಕೇಂಧ್ರ ಚುನಾವಣಾ ಆಯೋಗಕ್ಕೂ ತೆಗೆದುಕೊಂಡು ಹೋಗುತ್ತೇವೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವಂತೆ ಮನವಿ ಮಾಡತ್ತೇವೆ ಎಂದರು.
ಚಿಲುಮೆ ಸಂಸ್ಥೆಗೆ ಮೈತ್ರಿ ಸರ್ಕಾರ ಅನುಮತಿ ನೀಡಿದ್ರೆ ತನಿಖೆಯಾಗಲಿ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಏಕಾಏಕಿ ರದ್ದು ಮಾಡಿದ್ದಾರೆ. ಎಲ್ಲರ ಅವಧಿಯಲ್ಲಿನ ಅನುಮತಿ ಬಗ್ಗೆ ತನಖೆಯಾಗಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
Key words: Bangalore-Voter ID-CM-Basavaraj bommai-DK Shiva kumar