ಬೆಂಗಳೂರು,ಜೂನ್,24,2022(www.justkannada.in): ಬಿಬಿಎಂಪಿಯ ವಾರ್ಡ್ ಗಳನ್ನು 198ರಿಂದ 243ಕ್ಕೆ ಏರಿಕೆ ಮಾಡಲಾಗಿದ್ದು ವಾರ್ಡ್ ಗಳ ಮರು ವಿಂಗಡಣೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ತುಷಾರ್ ಗಿರಿನಾಥ್, ಸರ್ಕಾರದ ನಿಯಮದ ಪ್ರಕಾರ. ಜನಸಂಖ್ಯೆ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿಯನ್ನು ಆಧರಿಸಿ ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆಗೂ 15 ದಿನಗಳ ಕಾಲ ಅವಕಾಶ ನೀಡಲಾಗಿದೆ. ಕೆಲವು ವಾರ್ಡ್ ಗಳ ಜನಸಂಖ್ಯೆ ಹೆಚ್ಚಿದ್ದರೇ, ಮತ್ತೆ ಕೆಲವು ವಾರ್ಡ್ ಗಳ ಸಂಖ್ಯೆ ಕಡಿಮೆಯಾಗಿದೆ. ಮರು ವಿಂಗಡಣೆಯ ನಂತರ ಜನಸಂಖ್ಯೆ ಕೂಡ ವಿಭಾಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೂ ಹೊಸ ವಾರ್ಡ್ ಗಳ ಮ್ಯಾಪ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಮರು ವಿಂಗಡಣೆ ಮಾಡಿರುವ ವಾರ್ಡ್ ಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
Key words: Bangalore -Wards –BBMP- Commissioner -Tushar Girinath