ಬೆಂಗಳೂರು:ಜೂ-11:(www.justkannada.in) ಯುವತಿಯನ್ನು ಹಿಂದೆ ಕೂರಿಸಿಕೊಂಡು ಅಪಾಯಕಾರಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶಕ್ಕೆ ಕಾರಣನಾಗಿದ್ದ ಯುವಕನನ್ನು ಹೆಬ್ಬಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೂರ್ ಅಹಮ್ಮದ್(21) ಬಂಧನಕ್ಕೊಳಗಾದ ಯುವಕ. ತನ್ನ ಸ್ನೇಹಿತೆ ಜತೆ ನಂದಿಬೆಟ್ಟಕ್ಕೆ ತೆರಳುವಾಗ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿಡಿಯೋ ನೋಡಿದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು.
ನೂರ್ ಅಹಮ್ಮದ್ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಇತ್ತೀಚೆಗೆ ನೂರ್ ತನ್ನ ಸ್ನೇಹಿತ ಇಮ್ರಾನ್ ಬಳಿ ಸ್ಕೂಟಿ ಪಡೆದು ಜೂನ್ 6ರಂದು ತನ್ನ ಸ್ನೇಹಿತೆ ಜೊತೆ ನಂದಿಬೆಟ್ಟಕ್ಕೆ ತೆರಳಿದ್ದ. ಈ ವೇಳೆ ನೂರ್ ಅಹಮ್ಮದ್ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲ್ಹಿಂಗ್ ಭಯಂಕರವಾದ ವ್ಹೀಲಿಂಗ್ ಮಾಡಿದ್ದಾನೆ. ಇವರಿಬ್ಬರ ವ್ಹೀಲಿಂಗ್ ವಿಡಿಯೋ ಜಾಅಲತಾಣಗಳಲ್ಲಿ ಅಪ್ ಲೋಡ್ ಆಗಿತ್ತು.
ಸೋನು ಎಂಬ ಯುವತಿಯ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೋವೊಂದು ಅಪ್ಲೋಡ್ ಆಗಿ ಆಗಿತ್ತಲ್ಲದೇ ಆಕ್ರೋಶಕ್ಕೂ ಕಾರಣವಾಗಿತ್ತು. ವಿಡಿಯೋದಲ್ಲಿ ಯುವಕ ನೂರ್ ಅಹಮ್ಮದ್ ತನ್ನ ಡಿಯೋ ಸ್ಕೂಟರ್ ಸವಾರಿ ಮಾಡುತ್ತಾ ಸೀಟ್ ಮೇಲೆ ನಿಂತು ವ್ಹೀಲಿಂಗ್ ಮಾಡಿದ್ದ. ಸ್ಕೂಟರ್ನ ಹಿಂಬದಿ ಕುಳಿತಿದ್ದ ಆತನ ಸ್ನೇಹಿತೆ ತನ್ನ ಒಂದು ಕೈನಲ್ಲಿ ಆತನ ಕಾಲು ಹಿಡಿದು ವ್ಹೀಲಿಂಗ್ ಮಾಡುವಂತೆ ಹುರಿದುಂಬಿಸಿದ್ದಳು. ಈ ವ್ಹೀಲಿಂಗ್ ಕ್ಷಣವನ್ನು ಹಿಂಬದಿ ಬರುತ್ತಿದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಸಂಚಾರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾಗ ನೂರ್ ಅಹ್ಮದ್ ಸ್ನೇಹಿತ ಇಮ್ರಾನ್ ಪೊಲೀಸರನ್ನು ಕಂಡು ಪರಾರಿಯಾಗಿದ್ದನು. ಈ ವೇಳೆ ಪೊಲೀಸರು ಆತನ ಸ್ಕೂಟಿ ನಂಬರ್ ಬರೆದುಕೊಂಡು ತನಿಖೆ ನಡೆಸಿದ್ದಾರೆ. ಇಮ್ರಾನ್ , ನೂರ್ ಅಹಮ್ಮದ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ನೂರ್ ನನ್ನು ಬಂಧಿಸಿರುವ ಪೊಲೀಸರು ಸ್ಕೂಟಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.