ಬೆಂಗಳೂರು:ಜುಲೈ-22:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪೊಲೀಸ್ ಫೈರಿಂಗ್ ನಡೆದಿದೆ. ಕಾಟನ್ಪೇಟೆ ಬಳಿ ರೌಡಿಶೀಟರ್ ಮೇಲೆ ಪೊಲೀಸರು ಶೂಟೌಟ್ ನಡೆಸಿ ಬಂಧಿಸಿದ್ದಾರೆ.
ಅನಿಲ್ (32) ಶೂಟೌಟ್ಗೆ ಒಳಗಾದ ಆರೋಪಿ. ಚಾಮರಾಜಪೇಟೆ ಸಬ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಎಂಬುವವರಿಂದ ಶೂಟೌಟ್ ನಡೆಸಲಾಗಿದ್ದು, ತಡರಾತ್ರಿ 12.55 ಗಂಟೆಗೆ ಕಾಟನ್ ಪೇಟೆಯ ವೆಟರ್ನರಿ ಹಾಸ್ಪಿಟಲ್ ಹಿಂಭಾಗದಲ್ಲಿ ಫೈರಿಂಗ್ ನಡೆದಿದೆ.
ಆರೋಪಿ ಅನಿಲ್ ಕಳೆದ ತಿಂಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದನ. ಖಚಿತ ಮಾಹಿತಿಯ ಆಧಾರದ ಮೇಲೆ ನಿನ್ನೆ ರಾತ್ರಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಆರೋಪಿ ಶರಣಾಗದೆ ಪೋಲಿಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಸಬ್ ಇನ್ಸ್ಪೆಕ್ಟರ್ ತಮ್ಮ ಬಳಿಯಿದ್ದ ಪಿಸ್ತೂಲ್ನಿಂದ ಆರೋಪಿಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಈ ಘಟನೆಯಲ್ಲಿ ಪೇದೆ ಚಂದ್ರಶೇಖರ್ ಪಾಟೀಲ್ ಎಂಬುವವರ ಎಡ ಭುಜಕ್ಕೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪೇದೆ ಹಾಗೂ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.