ಮೈಸೂರು,ಜ,28,2020(www.justkannada.in): ಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ದರೋಡೆಕೋರನನ್ನ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಿವಾಸಿ ಸಂಪತ್ತು (30) ಬಂಧಿತ ಆರೋಪಿ. ಹುಣಸೂರಿನ ಬೈಪಾಸ್ ರಸ್ತೆಯ ಕೆನರಾ ಬ್ಯಾಂಕ್ ಬಳಿ ಸಂಪತ್ತನನ್ನ ಹುಣಸೂರು ಪೊಲೀಸರು ಬಂದಿಸಿದ್ದಾರೆ.
2008ರಲ್ಲಿ ಬಿಡದಿ ಬಳಿ ಜ್ಯೋತಿ ಎಂಬ ಮಗು ಕೊಲೆ ಮಾಡಿ ಸಂಪತ್ ೧೨ ವರ್ಷ ಜೈಲಿನಲ್ಲದ್ದ. ಈ ಪ್ರಕರಣದಲ್ಲಿ 12ವರ್ಷ ಜೈಲಿನಲ್ಲಿದ್ದು ಸಂಪತ್ ಬಿಡುಗಡೆಯಾಗಿದ್ದ. ನಂತರ 2010ರಲ್ಲಿ ಬೆಲ್ ನಲ್ಲಿ ಹೊರ ಬಂದು ಹಾಸನದ ರಾಮನಾಥ್ ಪುರದಲ್ಲಿ ವ್ಯಕ್ತಿ ನಂಬಿಸಿ 20ಸಾವಿರ ವಂಚಿಸಿದ್ದನು.
ನಂತ್ರ ಟಿ.ನರಸೀಪುರದಲ್ಲಿ ಲೋನ್ ಕೊಡಿಸೋದಾಗಿ ದಂಪತಿಯಿಂದ 2 ಸಾವಿರ ನಗದು ಹಾಗೂ ಚಿನ್ನಾಭರಣ ಲಪಟಾಯಿಸಿದ್ದನು. ಆರೋಪಿ ಕಳೆದ 6ತಿಂಗಳ ಹಿಂದೆ ಮೈಸೂರಿನ ಆಲನಹಳ್ಳಿಯಲ್ಲಿ ದಂಪತಿಗೆ ವಂಚಿಸಿ 1500ನಗದು ಚಿನ್ನಾಭರಣ ಕದ್ದಿದ್ದ ನು. ಒಂದು ವಾರದ ಹಿಂದೆ ಕೆ.ಆರ್.ನಗರದ ಸಾಲಿಗ್ರಾಮದಲ್ಲಿ ಸಾಲ ಕೊಡಿಸುವುದಸಗಿ ನಂಬಿಸಿ ಮಾಂಗಲ್ಯ ಸರ ಪಡೆದು ಎಸ್ಕೇಪ್ ಆಗಿದ್ದ. ವಂಚನೆ ದರೋಡೆ ಪ್ರಕರಣದ ಆರೋಪಿ ಸಂಪತ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತನಿಂದ 43ಗ್ರಾಂ ಮಾಂಗಲ್ಯ ಸರ, 2ಜೊತೆ ಚಿನ್ನದ ಓಲೆ, 3ಉಂಗುರ, ನಾಲ್ಕು ಚಿನ್ನದ ಕಾಸು, 98ಚಿನ್ನದ ಗುಂಡುಗಳು ವಶಕ್ಕೆ ಪಡೆಯಲಾಗಿದೆ. ಹುಣಸೂರು ಪೊಲೀಸ್ ವೃತ್ತ ನಿರೀಕ್ಷಕ ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಲಾಗಿದೆ.
Key words:bank loan-robber –arrest-mysore