ಬೆಂಗಳೂರು,ಮಾರ್ಚ್,29,2021(www.justkannada.in) : ಸಂವಿಧಾನಿಕ ನೆಲದಲ್ಲಿ ಯಾರು ಯಾರಿಗೂ ಸಾಹುಕಾರರಲ್ಲ ಯಾರೂ ಕೂಡಾ ಬಾಬಾ ಸಾಹೇಬರಂತೆ ಮಹಾನಾಯಕರಾಗುವ ಯೋಗ್ಯತೆಯನ್ನೂ ಹೊಂದಿಲ್ಲ ದಯಮಾಡಿ ಸಾಹುಕಾರ ಎಂಬ ಫ್ಯೂಡಲ್ ಹಾಗೂ ಮಹಾನಾಯಕ ಎಂಬಂತಹ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆಯು ನಿಲ್ಲಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಆಗ್ರಹಿಸಿದ್ದಾರೆ.
ಇದೆಲ್ಲ ಬದಿಗಿಟ್ಟು ಜನರ ನೈಜ ಸಮಸ್ಯೆಗಳ ಬಗ್ಗೆಯೂ ಕೂಡಾ ಬಿಜೆಪಿ ಸರ್ಕಾರ ಗಮನ ಹರಿಸಲಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ರಾಜ್ಯದ ಜನರ ಸಮಸ್ಯೆ ಯಾವುದೋ ಕಸದ ಬುಟ್ಟಿಯಲ್ಲಿ ಬಿಸಾಡಬೇಕಾದ ಸಿ.ಡಿ. ಅಲ್ಲ, ಬದಲಿಗೆ ನಿರುದ್ಯೋಗ, ಬದುಕಿನ ಅಭದ್ರತೆ, ಕರೋನಾ ಸೋಂಕು, ಕೃಷಿ ತಿದ್ದುಪಡಿ ಕಾಯ್ದೆಗಳು, ಧಾರ್ಮಿಕ ವಿಷದ ವಾತಾವರಣ, ಅಸಂವಿಧಾನಿಕವಾದ ಮೀಸಲಾತಿ ಬೇಡಿಕೆ ಮತ್ತು ಬೆಲೆ ಏರಿಕೆ ಎಂಬುದನ್ನು ಅನ್ನ ತಿನ್ನುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ENGLISH SUMMARY…
Dr. H.C. Mahadevappa demands to stop using autocratic title like ‘Sahukaar’ and significant title like ‘Mahanayaka’
Bengaluru, Mar. 29, 2021 (www.justkannada.in): “Nobody is a ‘Sahukaar’ (rich) and nobody has the eligibility to become like Babasaheb Ambedkar under the Constitutional framework. Hence, I request to stop the usage of an autocratic title like ‘Sahukaar’ and the significant title ‘Mahanayaka’,” opined Dr. H.C. Mahadevappa.
“Let the BJP Government keep aside all these things and look at the other problems faced by the common man,” he suggested in his tweet.
Further, the tweet read, “Problems of the people of the state is not a thing which should be thrown in the dust bin. Everyone should understand the burning problems which need to be addressed urgently like unemployment, life insecurity, COVID-19 Pandemic, amended agricultural policies, toxic communal atmosphere, unconstitutional reservation demands and increasing prices of essential commodities.”
Keywords: Dr. H.C. Mahadevappa/ tweet/ ‘Sahukaar’/ ‘Mahanayaka’/ stop using feudal titles
key words : banker-feudal-Great Leader-Called-Significance-Word-attic-use-Stop-Dr.H.C.Mahadevappa