ಮೈಸೂರು,ಜೂ,10,2019(www.justkannada.in): ಬ್ಯಾಂಕ್ ಸಾಲ ತೀರಿಸಲಾಗದೆ, ಬ್ಯಾಂಕ್ ನವರ ಕಿರುಕುಳಕ್ಕೆ ಬೇಸತ್ತ ಕುಟುಂಬ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದೆ.
ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಮನುಗನಹಳ್ಳಿ ನಿವಾಸಿಯಾದ ಹೆಚ್. ಶೇಖರ್ ಕುಟುಂಬಸ್ಥರೇ ದಯಾಮರಣಕ್ಕೆ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೆಚ್.ಶೇಖರ್ ಕುಟುಂಬ ಮನೆ ನಿರ್ಮಾಣಕ್ಕಾಗಿ 2015ರಲ್ಲಿ ಡಿಎಚ್ ಎಫ್ ಎಲ್ ಬ್ಯಾಂಕ್ ನಲ್ಲಿ 22ಲಕ್ಷದ ಎಂಬತ್ತು ಸಾವಿರ ಸಾಲ ಪಡೆದಿತ್ತು.
ಈ ನಡುವೆ ಶೇಖರ್ ಕುಟುಂಬ ಮನೆಯಲ್ಲು ಚಪಾತಿ ಮಾಡಿ ಹೋಟೆಲ್ ಗಳಿಗೆ ಮಾರಾಟ ಮಾಡು ಜೀವನ ಸಾಗಿಸುತ್ತಿದ್ದರು. ಆದರೆ ಶೇಖರ್ ಕುಟುಂಬ ಸಾಲ ತೀರಿಸಲಾಗದೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸಾಲಾ ತೀರಿಸಲು ಕಾಲವಕಾಶ ಕೊಡಿಸಿ, ಇಲ್ಲವಾದರೆ ಕುಟುಂಬ ಸಮೇತರಾಗಿ ದಯಾಮರಣ ಹೊಂದಲು ಅವಕಾಶ ಕೊಡಿ ಎಂದ ಕುಟುಂಬ ಮನವಿ ಮಾಡಿದೆ.
ಬ್ಯಾಂಕ್ ನವರು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಮನೆ ಜಪ್ತಿ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇರುವ ಮನೆಯನ್ನು ಕಳೆದುಕೊಂಡು ನಾವು ಬದುವುಕುವುದ ಹೇಗೆ. ಬ್ಯಾಂಕ್ ನವರ ಕಿರುಕುಳ ತಾಳಲಾರದೆ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ರೈತ ಕುಟುಂಬ ಅಳಲು ತೋಡಿಕೊಂಡಿದೆ.
Key words: Bank’s harassment background. Family to apply for euthanasia.
#Mysore #Bankharassment #Family #euthanasia.