ಮೈಸೂರು,ಮಾರ್ಚ್,3,2023(www.justkannada.in): ಬಂಟರ ಸಮಾಜವನ್ನು 3ಬಿ ಯಿಂದ 2ಎಗೆ ವರ್ಗಾವಣೆ ಮಾಡುವಂತೆ ಬಂಟರ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಂಟರ ಸಮಾಜದ ಮುಖಂಡರು, ಬಂಟರ ಸಮಾಜ ಶ್ರೀಮಂತ ಸಮಾಜವಲ್ಲ , ಶಿಕ್ಷಣ, ಆರೋಗ್ಯ ರಾಜಕೀಯ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ. ನಮ್ಮ ರಾಜ್ಯದಲ್ಲಿ ಎಲ್ಲಾ ಸಮಾಜಗಳಿಗೆ ಇರುವ ಸೌಕರ್ಯ ನಮಗಿಲ್ಲ.ನಮ್ಮ ಸಮುದಾಯದಲ್ಲಿ ಒಬ್ಬರು ಎಂ.ಎಲ್.ಸಿ ಒಬ್ಬರು ಎಂಪಿ ಐವರು ಶಾಸಕರು ಇದ್ದರೂ ಪ್ರಯೋಜನವಾಗುತ್ತಿಲ್ಲ.
ಬಿಜೆಪಿಯ ರಾಜ್ಯಾಧ್ಯಕ್ಷ ಕಟೀಲ್ ನಮ್ಮ ಸಮುದಾಯದವರು. ಇಷ್ಟೆಲ್ಲಾ ಇದ್ದರೂ ಒಂದು ನಿಗಮ ಇಲ್ಲದಿರುವುದು ವಿಷಾದನೀಯ. ನಮ್ಮ ಸಮಾಜಕ್ಕೆ ಒಂದು ಅಭಿವೃದ್ದಿ ನಿಗಮ ಬೇಕೆ ಬೇಕು. ಆದ್ದರಿಂದ ನಾವು ಸ್ವಾಭಿಮಾನದಿಂದ ನಮ್ಮ ಹಕ್ಕನ್ನು ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಈ ಮೂಲಕ ತಿಳಿಸುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಪೂರೈಸದಿದ್ದರೆ ಹೋರಾಟದ ಹಾದಿ ಹಿಡಿಯುವುದು ನಿಶ್ಟಿತ ಎಂದು ಸರ್ಕಾರಕ್ಕೆ ಬಂಟರ ಸಮಾಜದ ಮುಖಂಡರು ಎಚ್ಚರಿಕೆ ನೀಡಿದರು.
Key words: Bantara Samaj –demands- transfer -3B to 2A-mysore