ಬೆಂಗಳೂರು ,ಮಾರ್ಚ್,4,2025 (www.justkannada.in): ಬಿಎಸ್ ಯಡಿಯೂರಪ್ಪ ಲಿಂಗಾಯತರಲ್ಲ. ಬಿಜೆಪಿಯ ಬ್ಲ್ಯಾಕ್ ಮೇಲರ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ವೀರಶೈವ ಲಿಂಗಾಯತ ಎಂದು ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಲಿಂಗಾಯತ ಅಲ್ಲ ಬಿಜೆಪಿಯ ಬ್ಲಾಕ್ ಮೇಲರ್. ಬಿಎಸ್ ವೈ ಕರೆದ ಯಾವುದೇ ಸಭೆಗಳಿಗೆ ವೀರಶೈವ ಲಿಂಗಾಯತರು ಹೋಗಬೇಡಿ ಎಂದು ಹೇಳುತ್ತೇವೆ. ವೀರಶೈವ ಲಿಂಗಾಯತರು ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಬ್ಲಾಕ್ ಮೇಲರ್ ಆದರೆ ಯಡಿಯೂರಪ್ಪ ಬಿಜೆಪಿಯ ಬ್ಲಾಕ್ ಮೇಲರ್ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಬಳೆಗಾರ ಶೆಟ್ಟರು ಯಾವುದೋ ಬೇರೆ ಕುಟುಂಬ ಬಿಎಸ್ ಯಡಿಯೂರಪ್ಪ ಹುಟ್ಟೂರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ. ಅಲ್ಲಿಗೆ ಹೋಗಿ ಕೇಳಿದರೆ ಗೊತ್ತಾಗುತ್ತದೆ. ಯಾವ ಸಮುದಾಯ ಎಂದು ತಿಳಿಯುತ್ತೆ ಎಂದು ಯತ್ನಾಳ್ ತಿಳಿಸಿದರು.
Key words: BS Yeddyurappa, not, Lingayat, Basanagowda patil yatnal