ಕೊಪ್ಪಳ,ಮಾರ್ಚ್,31,2025 (www.justkannada.in): ತಮ್ಮನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಿಜೆಪಿ ಹೈಕಮಾಂಡ್ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಇಂದು ಕೊಪ್ಪಳದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನನ್ನು ಉಚ್ಚಾಟನೆ ಮಾಡಿ ಬಿಎಸ್ ವೈ ಭ್ರಷ್ಟ ಕುಟುಂಬಕ್ಕೆ ಹಸಿರು ನಿಶಾನೆ ಕೊಟ್ಟಿದ್ದೀರಿ. ರಾಜ್ಯಬಿಜೆಪಿಯನ್ನ ಬಿಎಸ್ ವೈಗೆ ಲೀಸ್ ಕೊಟ್ಟದ್ದೀರಾ..? ಬಿಎಸ್ ವೈ ಕುಟುಂಬಕ್ಕೆ ಬಿಜೆಪಿ ಮಾರಿದ್ದೀರಾ..? ಬಿಎಸ್ ವೈ ಮೇಲೆ ಪೋಕ್ಸೋ ಕೇಸ್ ಇದೆ. ಬಿಎಸ್ ವೈ ಜೈಲಿಗೆ ಹೋಗ್ತಾರೆ. ಬಿಜೆಪಿ ಹಿಂದೂಗಳ ಪರವಾಗಿಲ್ಲ. ಕಾಂಗ್ರೆಸ್ ಜೊತೆ ಅಡ್ಜೆಸ್ಟ್ ಮೆಂಟ್ ಇದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಯಾವ ಜನ್ಮಕ್ಕೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ ಮುಸ್ಲೀಮರ ಪಕ್ಷ. ಹಿಂದೂಗಳ ಪಕ್ಷ ಅಲ್ಲ. ಬಿಜೆಪಿ ನಕಲಿ ಜಾಲತಾಣದಲ್ಲಿ ಈ ರೀತಿ ನಡೆಯುತ್ತಿದೆ ಎಂದು ಹೇಳಿದರು.
Key words: lease, BJP , BSY, MLA, Basanagowda patil Yatnal