ಬೆಂಗಳೂರು,ಅ,19,2019(www.justkannada.in): ಸ್ವಾತಂತ್ರ್ಯ ಸಂಗ್ರಾಮದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮೆರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.
ಇಂದು ನಗರದ ಪರಾಗ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ಸಾರ್ವಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಚಿಂತನೆ ನಡೆದಿದೆ. ಇವರಿಗೂ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡ ಪ್ರಪ್ರಥಮ ಮಹಿಳೆಯಾಗಿರುವ ರಾಣಿ ಚೆನ್ನಮ್ಮ ತೊಡಗಿಸಿಕೊಂಡಿರುವ ಕಾರಣ ಅವರಿಗೆ ಈ ಗೌರವ ಸಿಗಬೇಕೆಂದರು.
ಇನ್ನು ರಾಜ್ಯ ಸರ್ಕಾರದಿಂದ ಪ್ರತೀ ವರ್ಷ ಆಚರಿಸಿಕೊಂಡು ಬಂದಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಿಕೊಂಡು ಬರಲಾಗಿದೆ. ಈ ವರ್ಷ ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ನೆರೆ ಸಂತ್ರಸ್ಥ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ಆಚರಿಸಲು ಸಮಾಜ ನಿರ್ಧರಿಸಿದೆ. ಆಚರಣೆಗೆ ನಿಗದಿಯಾಗಿರುವ 64 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಮನವಿ ಮಾಡಲಾಗಿದೆ ಎಂದು ಶ್ರೀ ಗಳು ವಿವರಿಸಿದರು.
ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗಬೇಕೆಂಬ ಉನ್ನತಮಟ್ಟದ ಸಮಿತಿಯು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಕೇಂದ್ರದ ನಿಧಾನಗತಿ ಹಿನ್ನೆಲೆಯಲ್ಲಿ ಕೋಟ್೯ ಮೊರೆ ಹೋಗುವ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಬಸನಗೌಡ ಪಾಟೀಲ್, ಜೆ.ಬಿ. ಪಾಟೀಲ್, ಡಾ. ಸಂಗಮೇಶ್ ಕೊಳ್ಳಿ, ಪಾಲನೇತ್ರ, ನಾಹರಾಜಮೂರ್ತಿ ಇದ್ದರು.
Key words: Basava Jaya Mritunjaya Swamiji -appeals – Rathna Ratna award- kittur rani chennamma