ಮೈಸೂರು,ನವೆಂಬರ್,8,2021(www.justkannada.in): ನವೆಂಬರ್ 10ರಂದು ಹೆಸರಾಂತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಅವರಿಗೆ 2019ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಚಿತ್ರದುರ್ಗ ಬಸವಕೇಂದ್ರ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ನೀಡಲಾಗುವ 2019 ಸಾಲಿನ ಬಸವಶ್ರೀ ಪ್ರಶಸ್ತಿಗೆ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಅವರು ಭಾಜನರಾಗಿದ್ದಾರೆ. ನವೆಂಬರ್ 10 ರಂದು ಸಂಜೆ 4 ಗಂಟೆಗೆ ರಾಜೀವ ತಾರನಾಥ್ 154,11ನೇ ಮೇನ್, ಜವರೇಗೌಡ ಉದ್ಯಾನ ಎದುರು ಸರಸ್ವತಿ ಪುರಂ ಮೈಸೂರು ಇಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮೈಸೂರು ಹೊಸಮಠದ ಶ್ರೀಗಳಾದ ಚಿದಾನಮದ ಸ್ವಾಮೀಜಿ, ಶಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಚಿತ್ರದುರ್ಗ ಬಸವಕೇಂದ್ರ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮೈಸೂರು ವಿವಿ ಕುಲಪತಿ ಪ್ರೊ. ಡಾ.ಜಿ. ಹೇಮಂತ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದ ಪಾಲನೇತ್ರ ಆಗಮಿಸಲಿದ್ದಾರೆ.
ಇದೇ ವೇಳೆ ಗಣೇಶ್ ಅಮೀನಗಡ ರಘುಪತಿ ತಾಮ್ಹನ್ ಕರ್ ಅವರು ಸಂಪಾದಿಸಿದ ಪಂಡಿತ್ ರಾಜೀವ ತಾರನಾಐ ಸರೋದ್ ಸ್ವರಯಾನ ಕೃತಿ ಬಿಡುಗಡೆ ಮಾಡಲಾಗುತ್ತದೆ.
Key words: Basavashree award- ceremony – Pandit Rajeeva Taranath-mysore
Basavashri award for Pandit Rajeev Taranath: Award to be given on Nov. 10
Mysuru, November 8, 2021 (www.justkannada.in): Renowned Sarod player Pandit Rajeev Taranath will be bestowed with the prestigious Basavashri Award for the year 2019 at a program to be held on November 10.
The award is given in the name of Chitradurga Basava Kendra of the Sri Jagadguru Murugharajendra Bruhanmath. The program will be held at the Javaregowda garden, in Saraswathipuram, Mysuru, at 4.00 pm on November 10.
A book titled ‘Pandit Rajeev Taranath Sarod Swaraanayana,’ authored by Ganesh Ameenghad Raghupati Tamhan Kar will be released on the occasion.
Keywords: Sarod player/ Rajeev Taranath/ Basavashri Award/ November 10