ಮೈಸೂರು, ಸೆಪ್ಟೆಂಬರ್ 08, 2019 (www.justkannada.in): ರಾಜ್ಯಕ್ಕೆ ಬ್ಯಾಟರಿ ಚಾಲಿತ ಬಸ್ ಬರಲಿವೆ!
ಹೌದು. ಸಾರಿಗೆ ಇಲಾಖೆಗೆ ಹೊಸ ರೂಪ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಅಸ್ಸಾಂ ರಾಜ್ಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ ಎಂದು ಮೈಸೂರಿನಲ್ಲಿ ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿದ್ದಾರೆ.
ವಿದೇಶಿ ಮಾದರಿಯಲ್ಲಿ ಬ್ಯಾಟರಿ ಚಾಲಿತ ಸಾರಿಗೆ ಬಸ್ಗಳನ್ನು ಬಳಸಲು ನಿರ್ಧರಿಸಲಾಗಿದೆ.ಈ ಸಂಬಂಧ ಬಸ್ಗಳನ್ನು ಸರಬರಾಜು ಮಾಡುಲು ವಿದೇಶಿ ಕಂಪನಿಗಳು ಮುಂದೆ ಬಂದಿವೆ.ಅಸ್ಸಾಂ ರಾಜ್ಯದಲ್ಲಿ ಬ್ಯಾಟರಿ ಚಾಲಿತ ಬಸ್ ಗಳು ಸಂಚಾರ ಆರಂಭಿಸಿವೆ. ಅವುಗಳನ್ನು ರಾಜ್ಯಕ್ಕೂ ತರಿಸಿಕೊಳ್ಳುವ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಹೊಸ ಬಸ್’ಗಳು, ಅದರ ಚಾರ್ಜಿಂಗ್, ಅದರ ನಿರ್ವಹಣೆ, ಎಲ್ಲವನ್ನೂ ಆ ಕಂಪನಿಗಳೇ ಮಾಡಿಕೊಳ್ಳಲಿವೆ. ಸಾರಿಗೆ ಇಲಾಖೆಯಲ್ಲಿ ಇರುವ ಚಾಲಕರು ನಿರ್ವಹಕರಿಗೆ ತರಬೇತಿ ನೀಡಿ ಅವರನ್ನೆ ಬಳಸಿಕೊಳ್ಳಲಾಗುವುದು. ಶೇ. ೪೦-೬೦ರ ಲಾಭಾಂಶದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಚಿವ ಲಕ್ಷಣ ಸವದಿ ಹೇಳಿದ್ದಾರೆ.