ಮಾನಸ ಗಂಗೋತ್ರಿಯಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಬೇಡಿಕೆ.

ಮೈಸೂರು,ಜನವರಿ,11,2022(www.justkannada.in): ಅಚ್ಚ ಹಸಿರಿನ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಇದೀಗ ಶಬ್ಧ ಹಾಗೂ ವಾಯು ಮಾಲಿನ್ಯ ರಹಿತ ಎರಡು ವಾಹನಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಸೇವೆ ಒದಗಿಸುತ್ತಿವೆ.

ಮಾನಸ ಗಂಗೋತ್ರಿ ಕ್ಯಾಂಪಸ್ ನೈಸರ್ಗಿಕ ಸೌಂದರ್ಯ ಇರುವ ವಿಶಾಲ ಪ್ರದೇಶ ಹೊಂದಿದೆ. ಇಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ವಿದ್ಯಾರ್ಥಿಗಳು, ಪೋಷಕರು ಸಂಚರಿಸಲು ಅನುಕೂಲವಾಗುವಂತೆ ಮೈಸೂರು ವಿಶ್ವವಿದ್ಯಾಲಯ ಬ್ಯಾಟರಿ ಚಾಲಿತ ‘ಇ ಕಾರ್ಟ್’ ವಾಹನಗಳನ್ನು ಒದಗಿಸಿದೆ. ಸದ್ಯ ಎರಡು ಬ್ಯಾಟರಿ ಚಾಲಿತ ವಾಹನಗಳು ಕ್ಯಾಂಪಸ್‌ ನಲ್ಲಿ ಸಂಚರಿಸುತ್ತಿವೆ.

ಉಚಿತ ಸೇವೆ:

ಚಾಲಕ ಸೇರಿದಂತೆ 9 ಆಸನ ಸಾಮಾರ್ಥ್ಯವುಳ್ಳ ಎರಡು ಇ-ಕಾರ್ಟ್‌ ಗಳನ್ನು ಖರೀದಿಸಲಾಗಿದೆ. ಕಳೆದ ಎರಡು ವರ್ಷದಿಂದ ಈ ವಾಹನಗಳು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಒಂದೆಡೆಯಿಂದ ಮತ್ತೊಂದೆಡೆ ಹೋಗಲು ನೆರವು ನೀಡುತ್ತಿವೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಸೇವೆ ಉಚಿತವಾಗಿ ಲಭ್ಯವಿದೆ.

“ಮೊದಲೆಲ್ಲಾ ಹಾಸ್ಟೆಲ್ ನಿಂದ ತಿಂಡಿ ಮುಗಿಸಿ ತರಗತಿಗೆ ಹಾಜರಾಗಲು ತಡವಾಗುತ್ತಿತ್ತು. ಆದರೆ ಇದೀಗ ಬ್ಯಾಟರಿ ಚಾಲಿತ ವಾಹನ‌ ವ್ಯವಸ್ಥೆ ಮಾಡಿರುವುದರಿಂದ ತರಗತಿಗೆ ಸರಿಯಾಗಿ ಹಾಜರಾಗುತ್ತಿದ್ದೇನೆ. ಅಪ್ಪ ಅಮ್ಮ ಬರಲು ಕೂಡ ಅನುಕೂಲ ಆಗಿದೆ. ಈ ಸೇವೆ ಒದಗಿಸಿದ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು ಎಂದು ವಿದ್ಯಾರ್ಥಿನಿ ಬೆಳಕು ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್ಲಿರುತ್ತದೆ ವಾಹನ?

ಗಂಗೋತ್ರಿ ಕ್ಯಾಂಪಸ್‌ ನ ದಕ್ಷಿಣ ದ್ವಾರದ ಕುವೆಂಪು ಪ್ರತಿಮೆ ಬಳಿ ಒಂದು ಹಾಗೂ ವಿಜ್ಞಾನ ಭವನದ ಸಮೀಪ ಮತ್ತೊಂದು ವಾಹನ ನಿಂತಿರುತ್ತದೆ. ವಿದ್ಯಾರ್ಥಿಗಳಿಗೆ ಚಾಲಕರ ಫೋನ್ ನಂಬರ್ ನೀಡಲಾಗಿದ್ದು, ಕರೆ ಮಾಡಿದರೆ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ.

‘‘ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್‌ ಗೆ ವಿದ್ಯಾರ್ಥಿಗಳನ್ನು ನೋಡಲು ಹಿರಿಯ ನಾಗರಿಕರು ಹಾಗೂ ಹಳ್ಳಿಯಿಂದ ಪಾಲಕರು ಬರುತ್ತಾರೆ. ವಿವಿ ಆವರಣ ವಿಶಾಲವಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ನಡೆದೇ ಹೋಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅನುಕೂಲವಾಗಲೆಂದು ಎರಡು ಇ-ಕಾರ್ಟ್ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ ಮತ್ತೆರಡು ವಾಹನಗಳ ಸೇವೆ ನೀಡಲಾಗುವುದು,’’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

Key words: battery –powered- vehicle -Manasa Gangotri-mysore

ENGLISH SUMMARY…

Demand for battery operated vehicle in Manasagangotri
Mysuru, January 11, 2022 (www.justkannada.in): Two soundless, pollution-free battery-operated vehicles used by the University of Mysore have gained popularity and demand among the students.
Manasagangotri is a huge campus, full of greenery. To protect the environment and make air pollution-free, the University of Mysore has come up with a unique idea of using battery-operated vehicles called ‘E Cart’. These E carts are offered to the students and parents who want to visit different departments. Services are provided free of cost. Presently only two carts are being used.
Each cart has a seating capacity of 9 people. The University of Mysore purchased two E-carts that are helping the students and the parents to visit one department to the other. These carts serve them from 9.00 am to 6.00 pm and are completely free of cost.
Students say, “Earlier we used to get let in returning to the classes after having breakfast. But due to these battery-operated e-carts, our problem has been solved. It also helps in transporting parents inside the campus. We would like to thank the University for making this special arrangement.”
One cart will be usually parked near the Kuvempu bust at the Southern entrance of the Manasagangotri campus, and the other will be parked near the Vignana Bhavana. Students will have the mobile numbers of the drivers, who attend to their calls and take them wherever they want at a phone call.
“Several senior citizens and parents visit our campus to see their children. As the campus is quite huge, they find it difficult to walk from one end to the other. Noticing this, we have introduced these unique services for their benefit. If the demand increases, we will plan to introduce two more vehicles,” opined Prof. G. Hemanthkumar, Vice-Chancellor, University of Mysore.
Keywords: University of Mysore/ E-carts/ Battery-operated cart/ Manasagangotri campus