ಬೆಂಗಳೂರು,ಜೂನ್,23,2021(www.justkannada.in): ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ 2ನೇ ಅಲೆ ಇಳಿಕೆಯಾಗುತ್ತಿದ್ದು ಈ ಹಿನ್ನೆಲೆಯಲ್ಲ ಲಾಕ್ ಡೌನ್ ಸಡಿಲ ಮಾಡಲಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಜನರ ಓಡಾಟ ಹೆಚ್ಚಾಗಿದ್ದು ಸೋಂಕಿತರಿರುವ ಪ್ರದೇಶವನ್ನ ಕಂಟೇನ್ಮೆಂಟ್ ಜೋನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಅನ್ ಲಾಕ್ ಆದ ಬಳಿಕ ಜನರ ಓಡಾಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 5ಕ್ಕೂ ಹೆಚ್ಚು ಕೇಸ್ ಬಂದರೆ ಕಂಟೇನ್ಮೆಂಟ್ ಜೋನ್ ಘೋಷಣೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಈ ಮಧ್ಯೆ ಹೋಂ ಐಸೋಲೇಷನ್ ನಿಯಮ ಬದಲು ಮಾಡಲಾಗಿದ್ದು ಇದೀಗ ಹೋಮ್ ಐಸೋಲೇಷನ್ ನಿರ್ಧಾರವನ್ನ ಬಿಬಿಎಂಪಿ ಹೆಗಲಿಗೆ ನೀಡಲಾಗಿದೆ. ಸೋಂಕಿತರಿಗೆ ಹೋಮ್ ಐಸೋಲೇಷನ್ ಬೇಕೋ ಬೇಡವೋ ಎಂಬುದನ್ನ ಬಿಬಿಎಂಪಿ ತೀರ್ಮಾನಿಸಲಿದೆ. ಫೋನ್ ಮೂಲಕ ನಿರ್ಧಾರ ಮಾಡುವ ಬದಲು ಸೋಂಕಿತರ ಸ್ಥಳ ಪರಿಶೀಲನೆ ನಡೆಸಿ ಹೋಂ ಐಸೋಲೇಷನ್ ಬೇಕೋ ಬೇಡವೋ ಎಂಬುದನ್ನ ತೀರ್ಮಾನಿಸಲಿದೆ ಎನ್ನಲಾಗಿದೆ.
key words: BBMP- decision – corona-containment zone – Bangalore