ಬೆಂಗಳೂರು,ನವೆಂಬರ್,12,2024 (www.justkannada.in) ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಇ ಖಾತಾವು ಬೆಂಗಳೂರು ಒನ್ ಕೇಂದ್ರದಲ್ಲಿ ದೊರೆಯಲಿದ್ದು, ಬಿಬಿಎಂಪಿ ಕಚೇರಿಗಳಿಗೆ ಅಲೆದಾಡುವುದರ ಬದಲಿಗೆ ಸಮೀಪದ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ನಿಗದಿತ ಶುಲ್ಕ ನೀಡಿ ಇ ಖಾತಾ ಪಡೆಯಬಹುದಾಗಿದೆ.
ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾ ವನ್ನು ಪಡೆಯಲು ಬೆಂಗಳೂರು ಒನ್ ಕೇಂದ್ರದ ಮೂಲಕ ಸಹಾಯವನ್ನು ಪಡೆಯಬಹುದು.
ಪ್ರತಿ ಆಸ್ತಿಗೆ ಪಾವತಿಸಬೇಕಾದ ಶುಲ್ಕ:
ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು.
ಬಿಬಿಎಂಪಿಗೆ 125 ರೂ.(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು.
ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬೇಕು(ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ನೀಡುವ ಅಗತ್ಯವಿಲ್ಲ)
(1) ನಿಮ್ಮ ಆಸ್ತಿ ತೆರಿಗೆ ರಶೀದಿ
(2) ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
(3) ಎಲ್ಲಾ ಮಾಲೀಕರ ಆಧಾರ್
(4) ಬೆಸ್ಕಾಂ ಬಿಲ್
(5) ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)
(6) ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
7) ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ(ಇದರ ದಾಖಲೆ ಹೊಂದಿದ್ದರೆ)
(8) ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)
(9) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆಹೊಂದಿದ್ದರೆ)
ನೀವು ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್ ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ.
ಇ-ಖಾತಾ ಪಡೆಯಲು ಸ್ವತಃ ನೀವೇ ಸಲ್ಲಿಸಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವ ಸಲುವಾಗಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ತರಬೇತಿ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದನ್ನು ನೋಡಿಕೊಂಡು ಸ್ವತಃ ಇ-ಖಾತಾಗೆ ಸಲ್ಲಿಸಬಹುದು.
ಕನ್ನಡ: https://youtu.be/JR3BxET46po?si=jDoSKqy2V1IFUpf6
ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT
Key words: BBMP, E-account, available, Bangalore One, centers