ಕರಗ ಉತ್ಸವಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್.

ಬೆಂಗಳೂರು,ಫೆಬ್ರವರಿ,10,2022(www.justkannada.in): ಕೊರೊನಾದಿಂದ ಎರಡು ವರ್ಷಗಳ ಕಾಲ ಬ್ರೇಕ್ ಬಿದ್ಧಿದ್ದ ಬೆಂಗಳೂರು ಕರಗ ಉತ್ಸವಕ್ಕೆ ಇದೀಗ ಈ ಬಾರಿ ಬಿಬಿಎಂಪಿ ಗ್ರೀನ್​ ಸಿಗ್ನಲ್​​​ ನೀಡಿದೆ.

ಹೌದು ಬೆಂಗಳೂರು ಕರಗಕ್ಕೆ ಗ್ರೀನ್​ ಸಿಗ್ನಲ್​​​ ಸಿಕ್ಕಿದ್ದು, ಧರ್ಮರಾಯಸ್ವಾಮಿ, ದ್ರೌಪದಮ್ಮ ಉತ್ಸವಕ್ಕೆ ಬಿಬಿಎಂಪಿ ಅಧಿಕಾರಿಗಳು  ಷರತ್ತು ಬದ್ದ ಅನುಮತಿ ನೀಡಿದ್ದಾರೆ.

ಕೊರೋನಾ ಮಹಾಮಾರಿಯಿಂದ ಎರಡು ವರ್ಷಗಳಿಂದ ಕೊರೋನಾ ಯಾವುದೇ ಜಾತ್ರೆ ಸಮಾರಂಭಗಳಿಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆ ಸುಮಾರು 800 ವರ್ಷಗಳ ಇತಿಹಾಸವಿರುವ ಕರಗ ಉತ್ಸವಕ್ಕೆ ನಿರ್ಬಂಧ ಏರಲಾಗಿತ್ತು. ಇದೀಗ ಕೋವಿಡ್ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕರಗ ಉತ್ಸವಕ್ಕೆ ಅನುಮತಿ ನೀಡಲಾಗಿದ್ದು, ಮಾರ್ಚ್​ 8ರಂದು ದ್ರೌಪದಮ್ಮ ಕರಗ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಪಾಲಿಕೆಗೆ  ಕರಗ ಉತ್ಸವ ಸಮಿತಿ ಅಧ್ಯಕ್ಷ ಪಿ.ಅರ್.ರಮೇಶ್ ಪತ್ರ ಬರೆದಿದ್ದರು.  ಸರ್ಕಾರದಿಂದಲೂ ಉತ್ಸವಕ್ಕೆ ಮೌಖಿಕ ಅನುಮತಿ ಸಿಕ್ಕಿದ್ದು, ಕರಗ ಉತ್ಸವದಲ್ಲಿ 50,000ಕ್ಕೂ ಹೆಚ್ಚು ಮಂದಿ ಭಾಗಿ ಸಾಧ್ಯತೆಗಳಿವೆ.

Key words: BBMP-Green Signal –karaga utsav

ENGLISH SUMMARY…

BBMP gives green signal for Bengaluru Karaga mahotsav
Bengaluru, February 10, 2022 (www.justkannada.in): The Bruhat Bengaluru Mahanagara Palike (BBMP) has given a green signal for the historic Bengaluru Karaga Mahotsav, which were stopped from the last two years due to the COVID-19 Pandemic.
The BBMP officials have given conditional permission to conduct the Dharmarayaswamy, Drowpadamma Utsav.
The Bengaluru Karaga Mahotsav has a rich history of about 800 years. However, restrictions were imposed on conducting the Mahotsav from the last two years due to the pandemic. This year permission has been given for the same following decrease in the number of Corona cases. The Drowpadamma Karaga Utsav will be held on March 8, and preparations have already started.
Karaga Committee Chairman P.R. Ramesh had written a letter to the BBMP seeking permission to conduct the Mahotsav. The State Government has also given oral permission. More than 50,000 people are expected to witness the Mahotsav.
Keywords: Bengaluru Karaga/ Mahotsav/ BBMP/ permission