ಸ್ವತ್ತುಗಳಿಗೆ ಬಿಬಿಎಂಪಿ ಖಾತಾ ಮಾಡಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ಬೆಂಗಳೂರು, ಜನವರಿ 13,2025 (www.juskannada.in):  ಬೆಂಗಳೂರು ನಗರದಲ್ಲಿ ಬಿಬಿಎಂಪಿ ಖಾತಾ ಹೊಂದಿರದ ಸುಮಾರು 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಇರಬಹುದೆಂದು ನಿರೀಕ್ಷಿಸಲಾಗಿದ್ದು, ಸ್ವತ್ತುಗಳಿಗೆ ಬಿಬಿಎಂಪಿ ಖಾತಾ ಮಾಡಿಸಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಬಿಬಿಎಂಪಿ ಖಾತಾ ಹೊಂದಿರದ 5 ಲಕ್ಷ ಆಸ್ತಿಗಳಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆ, ಹೊಸ ಖಾತಾ ಮಾಡಿಸೋರಿಗೆ ಅವಕಾಶ ಕೊಟ್ಟಿದ್ದು, https://bbmp.karnataka.gov.in/newkhata ವೆಬ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಪಾಲಿಕೆ ವ್ಯಾಪ್ತಿಯ ಆಸ್ತಿಗಳನ್ನ ತೆರಿಗೆ ವ್ಯಾಪ್ತಿಗೆ ತರಲು ಪ್ಲಾನ್ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,  ಬೆಂಗಳೂರು ನಗರದಲ್ಲಿ ಬಿಬಿಎಂಪಿ ಖಾತಾ ಹೊಂದಿರದ ಸುಮಾರು 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಇರಬಹುದೆಂದು ನಿರೀಕ್ಷಿಸಲಾಗಿದ್ದು, ಈ ಸ್ವತ್ತುಗಳು ಇಲ್ಲಿಯವರೆಗೆ ಯಾವುದೇ ಖಾತಾವಿಲ್ಲದೆ ಸಬ್‌ರಿಜಿಸ್ಟ್ರಾರ್ ಕಛೇರಿಗಳಲ್ಲಿ `ವಹಿವಾಟು ನಡೆಸುತ್ತಿದ್ದು. ಅವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ.

ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ರವರು ಈ 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ತರುವ ಮತ್ತು ಅರ್ಹತೆ ಹೊಂದುವ ಎಲ್ಲಾ ಸ್ವತ್ತುಗಳಿಗೂ ಬಿಬಿಎಂಪಿ ವತಿಯಿಂದ ಹೊಸ ಖಾತಾ ನೀಡುವ ದೂರದೃಷ್ಟಿಯೊಂದಿಗೆ ಮುನ್ನಡೆದಿದ್ದಾರೆ.

ಅದರಂತೆ, ಪಾಲಿಕೆಯು ಆನ್‌ಲೈನ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ನಾಗರಿಕರುಗಳು ಹೊಸ ಖಾತಾ ಪಡೆಯುವ ಸಲುವಾಗಿ ತಮ್ಮ (i) ಮಾರಾಟ/ನೋಂದಣಿ ಪತ್ರ (ii) ಆಧಾರ್ (iii) ಇಸಿ ಪ್ರಮಾಣ ಪತ್ರ (iv) ಆಸ್ತಿ ಫೋಟೊ (v) ಬೆಸ್ಲಾಂ ಐಡಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನೀವು ಬಿಬಿಎಂಪಿಯ ಖಾತೆಯನ್ನು ಹೊಂದಿರದಿದ್ದಲ್ಲಿ ದಯವಿಟ್ಟು ಆನ್‌ಲೈನ್ ಮೂಲಕ ಅರ್ಜಿಯನ್ನು ಬಿಬಿಎಂಪಿಯ ಜಾಲತಾಣವಾದ @ https://bbmp.karnataka.gov.in/newkhata ರಲ್ಲಿ ಸಲ್ಲಿಸಬಹುದು.

ಒಂದು ವೇಳೆ ನೀವು ಈಗಾಗಲೇ ನಿಮ್ಮ ಸ್ವತ್ತಿಗಾಗಿ ಬಿಬಿಎಂಪಿಯಿಂದ ಪಡೆದಿರುವ ಕೈಬರಹ ಖಾತೆಗಾಗಿ ಇ-ಖಾತಾ ಪಡೆಯಲು ಬಯಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಹೊಸ ಖಾತಾ ಪಡಿಯಲು ಅರ್ಜಿಯನ್ನು ಸಲ್ಲಿಸಬಾರದು. ತಪ್ಪಿದಲ್ಲಿ ಅಂತಹವವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Key words: Apply, online, BBMP Khata , properties