ಬೆಂಗಳೂರು,ಸೆ,27,2019(www.justkannada.in): ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆ, ಮೇಯರ್ ಅಭ್ಯರ್ಥಿಯಾಗಲು ಬಿಜೆಪಿಯಲ್ಲಿ ಮೂವರು ಕಾರ್ಪೋರೇಟರ್ ಗಳು ರೇಸ್ ನಲ್ಲಿದ್ದು ಕಮಲ ನಾಯಕರಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಕಾರ್ಪೋರೇಟರ್ ಗಳಾದ ಮಂಜುನಾಥ್ ರಾಜು, ಪದ್ಮನಾಭ ರೆಡ್ಡಿ ಮತ್ತು ಶ್ರೀನಿವಾಸ್ ಮೂವರು ಮೇಯರ್ ಅಭ್ಯರ್ಥಿಯಾಗಲು ರೇಸ್ ನಲ್ಲಿದ್ದಾರೆ. ಈ ಮೂವರ ಬೆನ್ನಿಗೆ ಅಯಾ ಬಿಜೆಪಿ ಶಾಸಕರು ನಿಂತಿದ್ದು ಹೀಗಾಗಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಮಿಸಿದೆ.
ಮಂಜುನಾಥ್ ರಾಜು ಪರ ಡಿಸಿಎಂ ಅಶ್ವಥ್ ನಾರಾಯಣ್, ಶ್ರೀನಿವಾಸ್ ಬೆನ್ನಿಗೆ ಆರ್.ಅಶೋಕ್ ಹಾಗೂ ಪದ್ಮನಾಭ ರೆಡ್ಡಿ ಪರ ರೆಡ್ಡಿ ಸಮುದಾಯದ ಶಾಸಕರು ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಬಿಜೆಪಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಭ್ಯರ್ಥಿ ಆಯ್ಕೆ ಮಾಡಿದರೇ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದ್ದು, ಹೀಗಾಗಿ ಸೆಪ್ಟಂಬರ್ 30ರವರೆಗೆ ಅಭ್ಯರ್ಥಿ ಆಯ್ಕೆ ಮಾಡದಿರಲು ಬಿಜೆಪಿ ನಿರ್ಧರಿಸಿದೆ.
Key words: BBMP- mayor- election-three corporators – race-BJP- candidate