ಬೆಂಗಳೂರು,ಅ,2,2019(www.justkannada.in): ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಕಾರ್ಯಕ್ರಮ ಗಾಂಧಿ ಜಯಂತಿಗೆ ಗೈರಾಗಿದ್ದಕ್ಕೆ ಗೌತಮ್ ಕುಮಾರ್ ಇಂದು ಕ್ಷಮೆಯಾಚಿಸಿದರು.
ನಿನ್ನೆಯಷ್ಟೇ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ್ ವಿರುದ್ದ 129 ಮತಗಳನ್ನ ಪಡೆದು ಗೌತಮ್ ಕುಮಾರ್ ಬಿಬಿಎಂಪಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದರು. ಆದರೆ ಇಂದು ನಡೆದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮಾತ್ರ ಹಾಜರಾಗಿದ್ದರು.
ಹೀಗಾಗಿ ಮೇಯರ್ ಆದ ಬಳಿಕ ಮೊದಲ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಕ್ಷಮೆಯಾಚಿಸಿದ ನೂತನ ಮೇಯರ್ ಗೌತಮ್ ಕುಮಾರ್, ಇವತ್ತು ಸತ್ಯ ಹೇಳಬೇಕು. ನಾನು ನೇರವಾಗಿ ಮಾತನಾಡುತ್ತೇನೆ. ನಿನ್ನೆ ನಿದ್ದೆ ಇರಲಿಲ್ಲ. ಆರೋಗ್ಯ ಸಮಸ್ಯೆ ಇತ್ತು. ತಲೆನೋವಿತ್ತು. ಹೀಗಾಗಿ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಲು ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.
Key words: BBMP – mayor -Gautam Kumar -pologized – first program- absent