ಬೆಂಗಳೂರು,ಸೆ,27,2019(www.justkannada.in): ಒಕ್ಕಲಿಗ ಸಮುದಾಯದವರಿಗೆ ಬಿಬಿಎಂಪಿ ಮೇಯರ್ ಸ್ಥಾನ ನೀಡಿ ಎಂದು ಒಕ್ಕಲಿಗರ ಸಂಘದ ಮುಖಂಡರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಮನವಿ ಸಲ್ಲಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾದ ಒಕ್ಕಲಿಗ ಸಂಘದ ನಿಯೋಗ ಈ ಬಾರಿ ಮೇಯರ್ ಅಭ್ಯರ್ಥಿ ಆಯ್ಕೆ ವೇಳೆ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಿ ಎಂದು ಮನವಿ ಮಾಡಿದರು.
ಬಿಎಸ್ ವೈ ಭೇಟಿ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದ ಒಕ್ಕಲಿಗ ಸಮುದಾಯದ ಮುಖಂಡರು, ಈ ಬಾರಿ ಬಿಬಿಎಂಪಿ ಮೇಯರ್ ಹುದ್ದೆಯನ್ನು ಒಕ್ಕಲಿಗ ಸಮುದಾಯದ ಪಾಲಿಕೆ ಸದಸ್ಯರಾದ ಮುನೀಂದ್ರಕುಮಾರ್ ಅಥವಾ ಎಲ್. ಶ್ರೀನಿವಾಸ ಅವರಿಗೆ ನೀಡುವಂತೆ ಮನವಿ ಮಾಡಿದರು. ಕಳೆದ. 17 ವರ್ಷಗಳಿಂದ ವಕ್ಕಲಿಗ ಸಮುದಾಯಕ್ಕೆ ಮೇಯರ್ ಪಟ್ಟ ಲಭಿಸಿಲ್ಲ ಎಂಬುದನ್ನು ಗಮನಕ್ಕೆ ತಂದರು.
ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ. ನಾಗರಾಜು. ಮಾಜಿ ನಿರ್ದೇಶಕರಾದ ಪ್ರೊ. ಮಲ್ಲಯ್ಯ, ಕೃಷ್ಣಮೂರ್ತಿ, ಕಾಳೇಗೌಡ ಹಾಗೂ ವಕ್ಕಲಿಗರ ಸಂಘಟನೆಗಳ ಒಕ್ಕೂಟದ ಮುಖಂಡರು ಜತೆಯಲ್ಲಿದ್ದರು. ಎಲ್. ಶ್ರೀನಿವಾಸ ಕುಮಾರಸ್ವಾಮಿ ಲೇಔಟ್ ನ ಕಾರ್ಪೋರೇಟರ್ ಆಗಿದ್ದಾರೆ. ಹಾಗೆಯೇ ಮುನೀಂದ್ರ ಕುಮಾರ್ ಅವರು ಜಕ್ಕೂರು ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ.
Key words: BBMP -mayor -vokkaliga community-Appeal -BJP President -Nalin Kumar Kateel