ಬೆಂಗಳೂರು,ಸೆಪ್ಟಂಬರ್,12,2022(www.justkannada.in): ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನ ನಿರ್ಮಾಣ ಮಾಡಿದ ಹಿನ್ನೆಲೆ ಮಳೆ ಪರಿಸ್ಥಿತಿಯಲ್ಲಿ ಬಡಾವಣೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಎಚ್ಚತ್ತುಕೊಂಡ ಸರ್ಕಾರ ಇದೀಗ ರಾಜಕಾಲುವೆ ಮೇಲಿನ ಕಟ್ಟಡಗಳ ತೆರವಿಗೆ ಮುಂದಾಗಿದೆ.
ಇಂದು ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಾಜಕಾಲುವೆ ಮೇಲೆ ಕಟ್ಟಿದ್ಧ ಕಟ್ಟಡಗಳ ನೆಲಸಮ ಮಾಡಿದ್ದಾರೆ. ನಗರದ ಮುನೇನಕೊಳಲು ಭಾಗದಲ್ಲಿ ಪೊಲೀಸ್ ಭದ್ರತೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಚಿನ್ನಪ್ಪನಹಳ್ಳಿಕೆರೆಯಿಂದ ಮುನೇನಕೊಳಲುಗೆ ಹೋಗುವ ರಾಜಕಾಲುವೆ ಒತ್ತುವರಿಯಾಗಿತ್ತು. ಇದೀಗ ತೆರವು ಕಾರ್ಯಾಚರಣೆ ನಡೆದಿದೆ.
Key words: BBMP-Operation- Demolition – buildings -constructed – Rajkaluve