ಬೆಂಗಳೂರು, ಡಿಸೆಂಬರ್ 29, 2022 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗಳಿಗಾಗಿ ೫೦೦ ಜನರನ್ನು ಆಯ್ಕೆ ಮಾಡುವ ಸಂಬಂಧ ತನ್ನ ಅಗಾಧವಾದ ತಾಳ್ಮೆ, ಉದಾತತೆ ಹಾಗೂ ಸಮಯಕ್ಕಾಗಿ ಇತ್ತೀಚೆಗೆ ಸುದ್ದಿ ಮಾಡಿದೆ. ಸೆಪ್ಟೆಂಬರ್ 1 ರಂದು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಿದ್ದು, ಈ ಸಮಾರಂಭ ನಾಲ್ಕು ತಾಸುಗಳಿಗೆ ವಿಸ್ತರಣೆಯಾಗಿ, ಸ್ಥಳದಲ್ಲಿ ಸಂಪೂರ್ಣ ಗೊಂದಲ ಸೃಷ್ಟಿಯಾಗಿತ್ತು.
ಇಲ್ಲಿ ಬಹಳ ರಂಜನೀಯ ವಿಷಯವೇನೆಂದರೆ ಬಿಬಿಎಂಪಿ ವತಿಯಿಂದ, ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭವನ್ನು ಆಯೋಜಿಸಿದ್ದ ಸ್ಥಳದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲು ಆಗಮಿಸಿದ್ದಂತಹ ಅಭ್ಯರ್ಥಿಗಳಿಗಾಗಲೀ ಅಥವಾ ಬಿಬಿಎಂಪಿ ಉದ್ಯೋಗಿಗಳಿಗಾಗಲೇ ತಿನ್ನಲು ಆಹಾರವನ್ನು ನೀಡದೆಯೇ ಗುತ್ತಿಗೆದಾರರಿಗೆ ದೊಡ್ಡ ಮೊತ್ತವನ್ನು ಪಾವತಿಸಿದೆ.
ಕೆಂಪೇಗೌಡ ಜಯಂತಿ ಸಮಾರಂಭ ಆಚರಣೆಗೆ ಸಂಬಂಧಪಟ್ಟಂತೆ ಬಿಬಿಎಂಪಿಯು ಮೆ| ಮಾರ್ಕೆಟಿಂಗ್ ಕಮ್ಯೂನಿಕೇಷನ್ಸ್ ಅಂಡ್ ಅಡ್ವರ್ಟೈಸಿಂಗ್ ಸಂಸ್ಥೆಗೆ ಸಮಾರಂಭಕ್ಕೆ ಆಗಮಿಸುವವರಿಗೆ ಕಾಫಿ/ಟೀ, ಲಘು ಉಪಹಾರ ಹಾಗೂ ಊಟವನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ವಹಿಸಿತಂತೆ. ಬಿಬಿಎಂಪಿಯ ಮುಖ್ಯ ಲೆಕ್ಕಪರಿಶೋಧಕರ ಗಮನಕ್ಕೆ ಬಂದಿರುವಂತೆ, ಬಿಬಿಎಂಪಿಯು ಈ ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭವನ್ನು ಎರಡು ಬಾರಿ ಅಂದರೆ ಆಗಸ್ಟ್ 8 ಹಾಗೂ 16ರಂದು ಎರಡು ಬಾರಿ ಹಲವು ಕಾರಣಗಳಿಗಾಗಿ ಮುಂದೂಡಿತು. ಅಂತಿಮವಾಗಿ ಈ ಸಮಾರಂಭವನ್ನು ಸೆಪ್ಟೆಂಬರ್ 1 ರಂದು ಆಯೋಜಿಸಲಾಯಿತು. ಈ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈರ್ಟಿಸಿಂಗ್ ಲಿಮಿಟೆಡ್ ಸಂಸ್ಥೆ ಅಭ್ಯರ್ಥಿಗಳಿಗೆ ಹಾಗೂ ಬಿಬಿಎಂಪಿ ಉದ್ಯೋಗಿಗಳಿಗೆ ಸಮಾರಂಭದ ಸ್ಥಳದಲ್ಲಿ ಕೇವಲ ಒಮ್ಮೆ ಟೀ ಮಾತ್ರ ನೀಡಿತು, ಯಾವುದೇ ರೀತಿ ಆಹಾರ ಅಥವಾ ಊಟವನ್ನು ನೀಡಲಿಲ್ಲ.
ಆದರೂ ಸಹ ಬಿಬಿಎಂಪಿ ದಿನಾಂಕ ೨೪, ೨೦೧೮ರಂದು ಸೃಷ್ಟಿಸಿರುವ ವೋಚರ್ ಸಂಖ್ಯೆ ೩೬೫೯ರ ಪ್ರಕಾರ ಮೆ| ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈರ್ಟಿಸಿಂಗ್ ಲಿಮಿಟೆಡ್ ಸಂಸ್ಥೆಗೆ ರೂ. ೪೯,೦೧,೪೯೫ ಅನ್ನು ಪಾವತಿಸಿದೆ. ಲೆಕ್ಕಪರಿಶೋಧನಾ ವರದಿಯ ಪ್ರಕಾರ ಆಗಸ್ಟ್ 8, 16 ಹಾಗೂ ಸೆಪ್ಟೆಂಬರ್ 1 ಈ ಮೂರು ದಿನಗಳಂದು ಬಿಬಿಎಂಪಿ ಉದ್ಯೋಗಿಗಳು, ಸಮಾರಂಭದ ಅಭ್ಯರ್ಥಿಗಳು ಹಾಗೂ ಇತರರಿಗೆ ಊಟೋಪಚಾರಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿಗೆ ಬಿಲ್ಲುಗಳು ಸಲ್ಲಿಕೆಯಾಗಿವೆ.
ಈ ಸಂಬಂಧ ಮುಖ್ಯ ಲೆಕ್ಕಪರಿಶೋಧಕರು ದಿನಾಂಕ ಅಕ್ಟೋಬರ್ ೮, ೨೦೨೦ರಂದು, ಎರಡು ಸಂದರ್ಭಗಳಲ್ಲಿ ಊಟವನ್ನೇ ಸರಬರಾಜು ಮಾಡದೇ ಹಣವನ್ನು ಏಕೆ ಪಾವತಿಸಲಾಗಿದೆ ಎಂದು ವಿವರಣೆ ಕೋರಿ ಬಿಬಿಎಂಪಿ ಪ್ರಾಧಿಕಾರಿಗಳಿಗೆ ಪತ್ರವನ್ನು (ಸಂಖ್ಯೆ. ೫೮) ಬರೆದಿದ್ದಾರೆ. ಇದಕ್ಕೆ ಬಿಬಿಎಂಪಿ ನೀಡಿರುವ ಉತ್ತರವೂ ಸಹ ಬಹಳ ಮನರಂಜಿತವಾಗಿದೆ. ಸಮಾರಂಭ ನಡೆಯುವ ಒಂದು ದಿನಕ್ಕೆ ಮುಂಚೆ ದಿನಸಿ, ತರಕಾರಿಗಳು, ಹಣ್ಣು ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಲಾಯಿತು ಹಾಗೂ ಹಲವು ಖಾದ್ಯ ಪದಾರ್ಥಗಳನ್ನು ಸಮಾರಂಭ ನಡೆದ ಹಿಂದಿನ ದಿನ ರಾತ್ರಿ ಸಿದ್ಧಪಡಿಸಲಾಯಿತು, ಎಂದು ಬಿಬಿಎಂಪಿ ತಿಳಿಸಿದೆ. ಜೊತೆಗೆ, ಈ ಪೈಕಿ ಕೆಲವು ಆಹಾರ ಪದಾರ್ಥಗಳನ್ನು ಸಮಾರಂಭ ನಡೆದಂತಹ ದಿನದಂದೇ ತಯಾರಿಸಲಾಯಿತಂತೆ.
ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಯವರು, ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಗುತ್ತಿಗೆದಾರರು ಆಗಸ್ಟ್ ೮ ಹಾಗೂ ೧೬ ಎರಡು ದಿನಗಳಂದು ಸಂಜೆ ಅಭ್ಯರ್ಥಿಗಳಿಗೆ ಲಘು ಉಪಹಾರ, ಕಾಫಿ, ಟೀ, ಬಾದಾಮಿ ಹಾಲು ಹಾಗೂ ಹೈ ಟೀ ಸರಬರಾಜು ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗೂ ಬಿಬಿಎಂಪಿಯವರು ಮೆ| ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈರ್ಟಿಸಿಂಗ್ ಲಿಮಿಟೆಡ್ ಸಂಸ್ಥೆಯವರಿಗೆ ಅವರು ನೀಡಿದ ಬಿಲ್ ಮೊತ್ತದಲ್ಲಿ ಈ ಮೊತ್ತವನ್ನು ಕಡಿತಗೊಳಿಸದೆಯೇ ಇಡೀ ಮೊತ್ತವನ್ನು ಪಾವತಿಸಿದೆ.
ಆದಾಗ್ಯೂ, ಮುಖ್ಯ ಲೆಕ್ಕಪರಿಶೋಧಕರು ಟೀ, ಕಾಫಿ, ಲಘು ಉಪಹಾರ, ಬಾದಾಮಿ ಹಾಲು ಹಾಗೂ ಹೈ ಟೀ ಸರಬರಾಜು ಮಾಡಿರುವುದಕ್ಕಾಗಿ ಮೆ| ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈರ್ಟಿಸಿಂಗ್ ಲಿಮಿಟೆಡ್ ಸಂಸ್ಥೆಯವರಿಂದ ಹಣವನ್ನು ಹಿಂದಕ್ಕೆ ಪಡೆಯುವಂತೆಯೂ ಬಿಬಿಎಂಪಿಗೆ ನಿರ್ದೇಶಿಸಿದ್ದಾರೆ, ಹಾಗೂ ಗುತ್ತಿಗೆದಾರರಿಗೆ ಪಾವತಿಸಿರುವ ರೂ.೪೯,೦೧,೪೯೫/- ಮೊತ್ತ ಆಕ್ಷೇಪಣೀಯ ಎಂದು ದೂರಿದ್ದಾರೆ.
ಈ ನಡುವೆ, ಮಾಹಿತಿ ಹಕ್ಕು ಅಧ್ಯಯನ ಕೇಂಧ್ರದ ನಿರ್ವಹಣಾ ಟ್ರಸ್ಟಿಗಳಾದ ಬಿ.ಹೆಚ್. ವೀರೇಶ್ ಹಾಗೂ ಎಸ್. ಅಮರೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರನ್ನು ನೀಡಿ, ಬಿಬಿಎಂಪಿ ವತಿಯಿಂದ ಗುತ್ತಿಗೆದಾರರಿಗೆ ಕಾನೂನುಬಾಹಿರವಾಗಿ ಪಾವತಿಸಿರುವ ರೂ.೨,೬೫೭ ಕೋಟಿಯನ್ನು ಹಿಂದಕ್ಕೆ ಪಡೆಯುವಂತೆಯೂ ಹಾಗೂ ಲೆಕ್ಕಪರಿಶೋಧಕರು ವರದಿಯಲ್ಲಿ ತಿಳಿಸಿರುವಂತೆ ರೂ.೬,೪೪೧ ಕೋಟಿ ಆಕ್ಷೇಪಣೀಯ ಪಾವತಿಗಳಿಗೆ ಸೂಕ್ತ ದಾಖಲೆಗಳು ಅಥವಾ ವಿವರಣೆ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾತನಾಡಿದ ವೀರೇಶ್ ಅವರು, “ಇದು ಅಭಿವೃದ್ಧಿ ಕಾಮಗಾರಿಗಳಿಗಾಗಿ ಇರುವಂತಹ ಮೊತ್ತದ ಸ್ಪಷ್ಟ ದುರುಪಯೋಗ. ಗುತ್ತಿಗೆದಾರರಿಗೆ ಕಾನೂನುಬಾಹಿರವಾಗಿ ಪಾವತಿಸಿರುವ ಹಣವನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಸೂಲಿ ಮಾಡುವಂತೆ ಬಿಬಿಎಂಪಿಯನ್ನು ಒತ್ತಾಯಿಸುತ್ತಿದ್ದೇವೆ,” ಎಂದರು
ವೀರೇಶ್ ಅವರು ಆರೋಪಿಸಿರುವಂತೆ ಈಗಾಗಲೇ ನಿಧನವಾಗಿರುವ ಗುತ್ತಿಗೆದಾರರಿಗೆ ಅಥವಾ ಸೇವೆಯಿಂದ ನಿವೃತ್ತರಾದರಿಗೆ ಹಣ ಪಾವತಿಸಿರುವುದಕ್ಕೆ ಕೆಲವು ಇಂಜಿನಿಯರುಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
“ನಿಯಮದ ಪ್ರಕಾರ, ಸೇವೆಯಿಂದ ನಿವೃತ್ತಿ ಹೊಂದುವ ಯಾವುದಾದರೂ ಬಿಬಿಎಂಪಿ ಇಂಜಿನಿಯರ್ ಅಥವಾ ಉದ್ಯೋಗಿಯ ವಿರುದ್ಧ ಯಾವುದೇ ದೂರುಗಳಾಗಲೀ ಅಥವಾ ಆರೋಪಗಳು ಇಲ್ಲದಿರುವುದನ್ನು ಮುಖ್ಯ ಲೆಕ್ಕಾಧಿಕಾರಿಯವರು ಪರಿಶೀಲಿಸಬೇಕು. ಆದರೆ ಮುಖ್ಯ ಲೆಕ್ಕಾಧಿಕಾರಿಯವರು ಯಾವುದೇ ಪರಿಶೀಲನೆ ಮಾಡದೆ, ನಿವೃತ್ತ ಉದ್ಯೋಗಿ ಅಥವಾ ಇಂಜಿನಿಯರ್ ಗೆ ನಿವೃತ್ತಿ ಲಾಭಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ,” ಎಂದು ಮಾಹಿತಿ ನೀಡಿದರು.
ಅಮರೇಶ್ ಅವರು, ಅಭಿವೃದ್ಧಿ ಕಾಮಗಾರಿಗಳಾಗಿ ಮೀಸಲಿರುವ ಸಾರ್ವಜನಿಕರ ಹಣ ಈ ರೀತಿ ದುರುಪಯೋಗವಾಗುತ್ತಿದ್ದರೆ ಲೆಕ್ಕಪರಿಶೋಧನೆ ಮಾಡುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ. “ಬಿಬಿಎಂಪಿಯ ಮಾನ್ಯ ಮುಖ್ಯ ಆಯುಕ್ತರು ಯಾವುದೇ ತಡ ಮಾಡದೆ ಮೊತ್ತವನ್ನು ಮರಳಿ ಪಡೆಯುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ,” ಎಂದು ಅಮರೇಶ್ ಹೇಳಿದರು.
ಈ ಸಂಬಂಧ ಮಾತನಾಡಿದ ಆಮ್ ಆದ್ಮಿ ಪಕ್ಷದ ಕರ್ನಾಟಕದ ವಕ್ತಾರರಾದ ಕೆ. ಮಥಾಯ್ ಅವರು ಹಣದ ಕೊರತೆಯನ್ನು ಎದುರಿಸುತ್ತಿರುವ ಬಿಬಿಎಂಪಿ ಡೀಫಾಲ್ಟರ್ ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಬಾಕಿ ಇರುವ ರೂ.೯,೦೦೦ ಕೋಟಿ ತೆರಿಗೆ ಹಣವನ್ನು ಕೂಡಲೇ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಬಾಕಿಯಿರುವ ತೆರಿಗೆ ಮೊತ್ತವನ್ನು ಸಂಗ್ರಹಿಸಲು ವಿಳಂಬ ಮಾಡುವ ಬಿಬಿಎಂಪಿ ಅಧಿಕಾರಿಗಳನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು ಹಗೂ ನಿಷ್ಟೆಯಿಂದ ಬಾಕಿ ತೆರಿಗೆಯನ್ನು ಸಂಗ್ರಹಿಸುವವರನ್ನು ಪ್ರಶಂಸಿಸಬೇಕು. ಉದ್ದೇಶಪೂರ್ವಕವಾಗಿ ಕರ್ತವ್ಯ ಲೋಪದಲ್ಲಿ ತೊಡಗುವಂತಹ ಸಿಬ್ಬಂದಿಗಳನ್ನು ಸೇವೆಯಿಂದ ಮುಲಾಜಿಲ್ಲದೆ ವಜಾಗೊಳಿಸಬೇಕೆಂದು,” ಮಥಾಯ್ ಒತ್ತಾಯಿಸಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: BBMP -paid – amount – contractor –without- providing- food