ಬೆಂಗಳೂರು, ಆಗಸ್ಟ್ 20, 2020 (www.justkannada.in): ಕಡಿಮೆ ಬಿಡ್ ಮೊತ್ತ ಸಲ್ಲಿಸಿರುವ ಡ್ರೀಮ್ 11ಗೆ ಪ್ರಾಯೋಜಕತ್ವ ನೀಡುವ ಬಗ್ಗೆ ಬಿಸಿಸಿಐ ಗೊಂದಲಕ್ಕೆ ಸಿಲುಕಿದೆ.
ಡ್ರೀಮ್ 11 ಮುಂದಿನ ಎರಡು ವರ್ಷಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಸಲ್ಲಿಸಿರುವ ಬಿಡ್ ಮೊತ್ತದ ಬಗ್ಗೆ ಈಗ ಬಿಸಿಸಿಐನಲ್ಲೇ ಅಸಮಾಧಾನವಿದೆ ಹೊರಬಿದ್ದೆ.
2021 ಮತ್ತು 2022 ರ ಐಪಿಎಲ್ ಗೂ ಡ್ರೀಮ್ 11 ತಲಾ 240 ಕೋಟಿ ರೂ.ಗಳ ಬಿಡ್ ಸಲ್ಲಿಸಿತ್ತು. ಆದರೆ ಈ ಮೊತ್ತ ಬಿಸಿಸಿಐಗೆ ಸಮಾಧಾನವಾಗಿಲ್ಲವೆನ್ನಲಾಗಿದೆ. ಹೀಗಾಗಿ ಈಗ ಡ್ರೀಮ್ 11 ಪ್ರಾಯೋಜಕತ್ವದ ಬಗ್ಗೆ ಮತ್ತಷ್ಟು ಚರ್ಚಿಸಿ ನಿರ್ಧಾರಕ್ಕೆ ಬರಲು ಬಿಸಿಸಿಐ ತೀರ್ಮಾನಿಸಿದೆ.