BDA ಹೆಸರೇಳಿಕೊಂಡು ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ, ಎಚ್ಚರಿಕೆ ವಹಿಸಿ : ಜನತೆಗೆ ಆಯುಕ್ತರ ಮನವಿ.

 

ಬೆಂಗಳೂರು, ನ.21, 2020 : (www.justkannada.in news ) ವಂಚಕರು ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ಅಕ್ರಮ-ಸಕ್ರಮ ಮತ್ತು ನಾಗರಿಕ ಸೌಲಭ್ಯ ನಿವೇಶನಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಮೋಸಗೊಳಿಸುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ BDA ಆಯುಕ್ತರು ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧ ಭಾಗಗಳಲ್ಲಿ ಮತ್ತು ತನ್ನ ಬಡಾವಣೆಗಳಲ್ಲಿ ನಾಗರೀಕ ಸೌಲಭ್ಯ ನಿವೇಶನಗಳನ್ನು ವಿವಿಧ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಕೆಲವು ಕಿಡಿಗೇಡಿಗಳು ಪ್ರಾಧಿಕಾರದ ಪತ್ರಗಳು, ಅಧಿಕಾರಿಗಳ ಸಹಿ, ಮೊಹರುಗಳನ್ನು ನಕಲು ಮಾಡಿ, ಈಗಾಗಲೇ ಗುತ್ತಿಗೆ ಆಧಾರದ ಮೇಲೆ ನಾಗರಿಕ ಸೌಲಭ್ಯ ನಿವೇಶನಗಳನ್ನು ಪಡೆದಿರುವ ಸಂಘ-ಸಂಸ್ಥೆಗಳಿಗೆ ಪ್ರಾಧಿಕಾರದ ಹೆಸರಿನಲ್ಲಿ ಪತ್ರಗಳನ್ನು ಕಳುಹಿಸಿ, ತಮಗೆ ಹಂಚಿಕೆ ಮಾಡಲಾದ ನಾಗರಿಕ ಸೌಲಭ್ಯ ನಿವೇಶನ ಇತರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರನ್ನು ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ಗುತ್ತಿಗೆದಾರರಲ್ಲಿ ಭಯ ಹುಟ್ಟಿಸಿ ಹಣವನ್ನು ವಸೂಲಿ ಮಾಡುವ ಪ್ರಕರಣಗಳು ಪತ್ತೆಯಾಗಿರುತ್ತವೆ.

kannada-journalist-media-fourth-estate-under-loss

ಇದೇ ಮಾದರಿಯಲ್ಲಿ ಅಕ್ರಮ-ಸಕ್ರಮ ವಿಷಯಕ್ಕೆ ಸಂಬಂಧಿಸಿದಂತೆ, ಕೆಲವು ಮನೆಯ ಮಾಲೀಕರುಗಳಿಗೆ/ ಭೂ ಮಾಲೀಕರುಗಳಿಗೆ ವಂಚಿಸುತ್ತಿರುವ ಪ್ರಕರಣಗಳೂ ಸಹ ಪತ್ತೆಯಾಗಿವೆ. ಕೆಲವು ಕಿಡಿಗೇಡಿಗಳು ಪ್ರಾಧಿಕಾರದ ಪತ್ರಗಳು, ಅಧಿಕಾರಿಗಳ ಸಹಿ, ಮೊಹರುಗಳನ್ನು ನಕಲು ಮಾಡಿ ಅಕ್ರಮ-ಸಕ್ರಮ ವ್ಯಾಪ್ತಿಗೆ ಒಳಪಡುವ ನಿವೇಶನ , ಮನೆ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ ಪ್ರಾಧಿಕಾರದ ಆಯುಕ್ತರ ಆದೇಶದ ಮೇರೆಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಸಕ್ರಮಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ, ಮೊಬೈಲ್‌ಗಳ ಮೂಲಕವೂ ಸಹ ಮಾಲೀಕರನ್ನು ಸಂಪರ್ಕಿಸಿ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ.

BDA-bangalore-development-authority-commissioner-warns-against-cheating

ಇಂತಹ ನಕಲಿ ಪತ್ರಗಳ ಬಗ್ಗೆ ಪ್ರಾಧಿಕಾರದ ಜಾಗೃತ ದಳವು ತನಿಖೆಯನ್ನು ಪ್ರಾರಂಭಿಸಿದ್ದು, ಪ್ರಕರಣವು ತನಿಖೆಯ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಾಧಿಕಾರದ ಹೆಸರಿನಲ್ಲಿ ಇಂತಹ ಯಾವುದೇ ಪತ್ರಗಳನ್ನು ಸ್ವೀಕರಿಸಿದರೆ ಆತಂಕಗೊಳ್ಳದೆ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪತ್ರದ ಸತ್ಯಾನುಸತ್ಯತೆಗಳನ್ನು ವಿಚಾರಿಸಿಕೊಳ್ಳಬೇಕೆಂದು ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

English summary…

BDA Commissioner warns citizens against perpetrators
Bengaluru, Nov. 21, 2020 (www.justkannada.in): The Bengaluru Development Authority (BDA) Commissioner has appealed to the citizens to be aware of perpetrators who are cheating in the name of BDA with respect to regularisation of illegal properties and civic facilities.BDA-bangalore-development-authority-commissioner-warns-against-cheating
Several organisations have been provided civic amenity sites on contract basis by the BDA. A few mischief mongers are sending notices of cancellation of the contract stating the land that has been granted to them is being used for some other purpose and hence their contracts will be cancelled using forged documents and are swindling money. Following complaints the BDA Commissioner has appealed to the citizens to be careful.
Keywords: BDA – pepetrators – cheating

oooo

key words : BDA-bangalore-development-authority-commissioner-warns-against-cheating