ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹರಾಜಿಗೆ ಹಾಕಲ್ಪಟಿರುವ 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ನಾಳೆ ಬೆಳ್ಳಗೆ (20/07/2020) 11 ಗಂಟೆಯಿಂದ ಪ್ರಾರಂಭವಾಗಲಿದೆ.
ಬಿಡ್ಡಿಂಗ್ ನಲ್ಲಿ ಭಾಗವಹಿಸವವರು ಪ್ರತಿ ನಿವೇಶನಕ್ಕೆ ನಾಲ್ಕು ಲಕ್ಷ ರೂಪಾಯಿಗಳ EMD ( Earnest money deposit) ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ಬೆಳ್ಳಗೆ 11am ಗೆ ಪ್ರಾರಂಭವಾಗಲಿದ್ದು, ನೋಂದಣಿ ಮಾಡಿಕೊಂಡವರು ತತ್ ಕ್ಷಣದಿಂದಲ್ಲೇ (20/07/2020 ರ ಬೆಳ್ಳಗೆ 11 ಗಂಟೆಯಿಂದ) 308 ಸೈಟ್ ಗಳಿಗೂ ಬಿಡ್ಡಿಂಗ್ ಮಾಡಬಹುದು.
ಒಟ್ಟು ಐದು ಹಂತದಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದ ಇ-ಹರಾಜು ಪ್ರಕ್ರಿಯೆ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ….
ಮೊದಲ ಹಂತ
1 ರಿಂದ 75 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 06/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 05/07/2020 ಸಂಜೆ 4pm.
ಎರಡನೇ ಹಂತ
76 ರಿಂದ 127ನೇ ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 07/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 06/07/2020 ಸಂಜೆ 4pm.
ಮೂರನೇ ಹಂತ
128 ರಿಂದ 191 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 08/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 07/07/2020 ಸಂಜೆ 4pm.
ನಾಲ್ಕನೇ ಹಂತ
192 ರಿಂದ 254 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 11/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 10/07/2020 ಸಂಜೆ 4pm.
ಐದನೇ ಹಂತ
255 ರಿಂದ 308 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 12/07/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 11/07/2020 ಸಂಜೆ 4pm.