ದಲ್ಲಾಳಿಗಳಿಗೆ ಕಡಿವಾಣ: ನೂತನ ಆಯುಕ್ತರಾಗಿ ಹೆಚ್.ಆರ್ ಮಹದೇವ್ ಬಂದ ಬಳಿಕ ಲಾಭದ ಹಾದಿಯಲ್ಲಿ ಬಿಡಿಎ….

ಬೆಂಗಳೂರು,ಜನವರಿ,18,2021(www.justkannada.in):  ಕೇವಲ ಒಂದು ವರ್ಷದ ಹಿಂದೆ ಗುತ್ತಿಗೆದಾರರಿಗೆ ಹಣ ನೀಡಲು ಕೂಡ ಪರದಾಡುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದೀಗ ಲಾಭದ ಹಾದಿಗೆ ಬಂದಿದೆ. ಬಿಡಿಎ  ಖಾತೆಯಲ್ಲಿ ಈಗ ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವಿದೆ. ಜತೆಗೆ ಅಕ್ರಮವೆಸಗುತ್ತಿದ್ದ ಅಧಿಕಾರಿಗಳಿಗೆ ಇದೀಗ ಭಯ ಪ್ರಾರಂಭವಾಗಿದೆ.  ಹೌದು ಬಿಡಿಎ ನೂತನ ಆಯುಕ್ತರಾಗಿ ಡಾ.ಎಚ್. ಆರ್.ಮಹದೇವ್ ಅಧಿಕಾರ ಸ್ವೀಕರಿಸಿದ ನಂತರ ಬಿಡಿಎ ಬದಲಾವಣೆಯ ಹಾದಿ ಹಿಡಿದಿದೆ.jk

ಬಿಡಿಎ ಆಯುಕ್ತರಾಗಿರುವ ಡಾ. ಎಚ್‌. ಆರ್. ಮಹದೇವ್ ಬಿಡಿಎ ನಿವೇಶನಗಳ ಅಕ್ರಮ ಪರಭಾರೆ ಹಗರಣವನ್ನು ಪೊಲೀಸರ ತನಿಖೆಗೆ ಒಳಪಡಿಸಿ ಸಾವಿರಾರು ಕೋಟಿ ಮೌಲ್ಯದ ಹಗರಣ ಬಯಲಿಗೆ ಎಳೆದಿದ್ದಾರೆ. ಬ್ರೋಕರ್ ಮುಕ್ತ ಬಿಡಿಎ ಮಾಡಲು ಮುಂದಾಗಿರುವ ಆಯುಕ್ತರ ದಿಟ್ಟ ನಿರ್ಧಾರದಿಂದ ಸಾವಿರಾರು ಕೋಟಿ ರೂಪಾಯಿ ಬಿಡಿಎ ಅಕ್ರಮ ನಿವೇಶನ ಪರಭಾರೆ ಹಗರಣ ಹೊರಬಿದ್ದಿದೆ.

ದಲಿತರಿಗೆ ಪುನರ್‌ ವಸತಿ ಕಲ್ಪಿಸುವ  ನೆಪದಲ್ಲಿ ಹುಟ್ಟಿಕೊಂಡ ದಲಿತ ಕಲ್ಯಾಣ ಸಂಸ್ಥೆಗಳು ಬಿಡಿಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡು ಅನ್ಯರಿಗೆ ಮಾರಾಟ ಮಾಡಿ ಸಾವಿರಾರು ಕೋಟಿ ಹಗರಣ ಮಾಡಿದ್ದು  ಹಗರಣವನ್ನ ಬಿಡಿಎ ಆಯಕ್ತ ಎಚ್.ಆರ್ ಮಹದೇವ್ ಬಯಲಿಗೆಳೆದಿದ್ದಾರೆ.

ಬಡವರು ಸೂರು ಕಟ್ಟಿಕೊಳ್ಳಲು ನಿವೇಶನ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ಬಿಡಿಎ ಬ್ರೋಕರ್ ಗಳ ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಗಿತ್ತು. ಬಿಡಿಎ ಅಕ್ರಮಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಸಿಬಿ ಪೊಲೀಸರು ಕೂಡ ಹಲವು ಕೇಸು ದಾಖಲಿಸಿದ್ದು, ತನಿಖೆ ಹಂತದಲ್ಲಿವೆ. ಆದರೆ, ಬಿಡಿಎಯನ್ನು ಬ್ರೋಕರ್ ಗಿರಿಗೆ ಬಿಸಿ ಮುಟ್ಟಿರಲಿಲ್ಲ.

ಅಧಿಕಾರಿಗಳಿಗೆ ಬಂಧನದ ಭೀತಿ…

ಬಿಡಿಎ ನಿವೇಶನ ಅಕ್ರಮ ಪರಭಾರೆ ಹಗರಣ ಸಂಬಂಧ ಸದ್ಯ ಶೇಷಾದ್ರಿಪುರಂ ಪೊಲೀಸರು ತನಿಖೆ ನಡೆಸುತ್ತಿದ್ದು, ಅಕ್ರಮಗಳಲ್ಲಿ ಭಾಗಿಯಾಗಿರುವ   ಅಧಿಕಾರಿಗಳ ವಿರುದ್ಧ ಮೊದಲು ಎಫ್‌ಐಆರ್ ದಾಖಲಾಗಿತ್ತು. ಉಪ ಕಾರ್ಯದರ್ಶಿಗಳಾಗಿ ಬಿಡಿಎನಲ್ಲಿ ಕಾರ್ಯ ನಿರ್ವಹಿಸಿದ ಐವರು ಅಧಿಕಾರಿಗಳು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವ ಅಂಶ ಪೊಲೀಸ್ ತನಿಖೆಯಲ್ಲಿ  ತಿಳಿದು ಬಂದಿದೆ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲು ಶೇಷಾದ್ರಿಪುರಂ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

bda-profit-after-hr-mahadev-came-new-commissioner
ಕೃಪೆ- internet

1307 ನಿವೇಶನಗಳ ಮಾರಾಟ…

2020 ಏಪ್ರಿಲ್- ಮೇ ತಿಂಗಳ ಅವಧಿಯಲ್ಲಿ ಬಿಡಿಎ ಖಾತೆಯಲ್ಲಿ ಇದ್ದದ್ದು ಕೇವಲ 3 ಕೋಟಿ ರು. ಮಾತ್ರ. ಅದನ್ನು ಅಂದಿನ ಆಯುಕ್ತ ಡಾ. ಜಿ.ಸಿ.ಪ್ರಕಾಶ್ ಅವರೇ ಅಧಿಕೃತಪಡಿಸಿದ್ದರು. ಬಿಡಿಎ ಕೂಡ ನಷ್ಟದ ಹಾದಿಯಲ್ಲಿತ್ತು. ಬಿಡಿಎ ನೂತನ ಆಯುಕ್ತರಾಗಿ ಡಾ.ಎಚ್. ಆರ್.ಮಹದೇವ್  ಬಂದ ನಂತರ ಐದು ಹಂತದಲ್ಲಿ ವಿವಿಧ ಬಡಾವಣೆಗಳ  ಮೂಲ ನಿವೇಶನಗಳನ್ನು ಇ ಹರಾಜು ಪ್ರಕ್ರಿಯೆ ಮೂಲಕ ಹರಾಜಿಗೆ ಇಟ್ಟ ಬಿಡಿಎ ಒಟ್ಟು 1811 ನಿವೇಶನಗಳ ಪೈಕಿ 1307 ನಿವೇಶನಗಳನ್ನು ಮಾರಾಟ ಮಾಡಲಾಗಿದೆ.

ಈ ನಿವೇಶನಗಳ ಮೂಲ ದರ 747.50 ಕೋಟ ರು.ಗಳಾಗಿದ್ದು, ಶೇ.56.35 ರಷ್ಟು ಲಾಭದ ಮೊತ್ತಕ್ಕೆ ಅಂದರೆ ಬರೋಬ್ಬರಿ 1168.73 ಕೋಟಿಗೆ ನಿವೇಶನಗಳು ಮಾರಾಟವಾಗಿವೆ.

ಇನ್ನು ಖಾಸಗಿ ವ್ಯಕ್ತಿಗಳೊಡನೆ ಶಾಮೀಲಾಗಿ ಅಕ್ರಮ ಎಸಗುತ್ತಿದ್ದುದ್ದನ್ನು ಪತ್ತೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಜತೆಗೆ ಹಲವು ವರ್ಷಗಳಿಂದ ಒಂದೇ ವಿಭಾಗದಲ್ಲಿದ್ದ ಸಿಬ್ಬಂದಿ ವರ್ಗ ಹಾಗೂ ಹೊರಗುತ್ತಿಗೆ ನೌಕರರ ಆಂತರಿಕ ಸ್ಥಳ ಬದಲಾವಣೆ ಮಾಡಲಾಗಿದೆ.

ENGLSIH SUMMARY…

Brokers curbed: BDA on profit path after H.R. Mahadev took over charge as new Commissioner
Bengaluru, Jan.18, 2021 (www.justkannada.in): The Bangalore Development Authority (BDA) which couldn’t pay money even to the contractors just a year ago has set on profit-making path now. The BDA bank account is full of money now. Moreover, the corrupt officials in BDA are scared to involve in corruption. All these are the achievements of DR. H.R. Mahadev, who took over as the new BDA Commissioner.
The BDA appears to be on the right path after the new commissioner took over charge. The new Commissioner Dr. H. R. Mahadev took the corruption in the distribution of BDA sites seriously and conducted a police investigation and has been successful in exposing a scam involving crores of rupees.

bda-profit-after-hr-mahadev-came-new-commissioner
ಕೃಪೆ- internet

There was only Rs. 3 crore in the BDA bank account in the month of April-May 2020, as revealed by then BDA Commissioner Dr. G.C. Prakash. BDA was clearly on the path of loss. But soon after Dr. H.R. Mahadev took over charge as the new Commissioner, he started the process of auctioning the sites in various BDA layouts in five phases through e-auctioning. As a result, 1307 sites were sold out of the total 1811, earning BDA a huge profit. The total amount of the sites sold was Rs.747.50 crore. Through e-auctioning it has earned Rs. 1167.73 crore which means the BDA has earned 56.35% profit!
Keywords: BDA/ New Commissioner H.R. Mahadev/ broker-free/ corruption

Key words:. BDA –profit- after- HR Mahadev -came – new Commissioner.