ಬೆಂಗಳೂರು,ಫೆಬ್ರವರಿ,10,2021(www.justkannada.in) : ಭವಾನಿ ಗೃಹನಿರ್ಮಾಣ ಸಂಘಕ್ಕೆ ಸಗಟು ನಿವೇಶನ ಹಂಚಿಕೆ ಮಾಡುವ ವಿಚಾರದಲ್ಲಿ 500 ಕೋಟಿ ರೂ. ಹಗರಣ ನಡೆಸಲು ಸಿದ್ಧತೆ ನಡೆದಿದೆ. ಜಾಗ ನೀಡಬಾರದು ಎಂದು ನಾನು ಪತ್ರ ಬರೆದರೂ ಆಯುಕ್ತರು ಕಿಮ್ಮತ್ತು ನೀಡಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಾಗೂ ಆಯುಕ್ತ ಎಚ್.ಆರ್ಮಹದೇವ್ ಅವರ ನಡುವಿನ ಶೀತಲ ಸಮರ ತಾರಕಕ್ಕೇರಿದೆ.
ಈ ಟ್ರಸ್ಟ್ ಜಾಗ ಪಡೆದಿರುವುದು 30 ವರ್ಷಗಳ ಹಿಂದೆ. 1988ರಲ್ಲಿ ಅವರಿಗೆ 20 ಎಕರೆ ಜಾಗ ನೀಡಿ ಆಗಿದೆ. ಆ ಟ್ರಸ್ಟ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ, ಇದರ ಸದಸ್ಯರು ಇದ್ದಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಇವೆಲ್ಲವನ್ನು ಪರಿಶೀಲಿಸದೆಯೇ 12 ಎಕರೆ ಜಾಗ ನೀಡುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದೆ. ನನ್ನ ಸೂಚನೆ ಮೀರಿ ಆಯುಕ್ತರು ಜಾಗ ಹಸ್ತಾಂತರ ಮಾಡಿದರೆ ಅವರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ ಎಂದು ದೂರಿದ್ದಾರೆ.
ವಿಶ್ವನಾಥ್ ಆರೋಪಕ್ಕೆ ಬಿಡಿಎ ಆಯುಕ್ತ ಎಚ್ .ಆರ್ ಮಹಾದೇವ್ ಸ್ಪಷ್ಟನೆ ನೀಡಿದ್ದು ಬಿಡಿಎ ನಿಯಮ ಉಲ್ಲಂಘಿಸಿ ಎಲ್ಲಾ ಕಡತ ನಾನು ಕೊಡಲಿಕ್ಕೆ ಬರಲ್ಲ. ನಾನು ಬಿಡಿಎ ರೂಲ್ಸ್ ಬ್ರೇಕ್ ಮಾಡಿ ಕೆಲಸ ಮಾಡಲ್ಲ . ನನ್ನ ಅವಧಿಯಲ್ಲಿ ಆಗಿರುವಷ್ಟು ತನಿಖೆ ಯಾರೂ ಮಾಡಿಸಿಲ್ಲ ಎಂದಿದ್ದಾರೆ.
ಎಲ್ಲ ಕಡತಗಳೂ ತನ್ನ ಮೂಲಕವೇ ಹೋಗಬೇಕೆಂದು ಅಧ್ಯಕ್ಷರು ಹೇಳುತ್ತಾರೆ. ಬಿಡಿಎ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇಲ್ಲ. ಕಾಯ್ದೆ ಪ್ರಕಾರ ಆಯುಕ್ತರೇ ಪ್ರಾಧಿಕಾರ ಮುಖ್ಯ ಕಾರ್ಯನಿರ್ಹವಣಾಧಿಕಾರಿ. ಅಂತಿಮ ತೀರ್ಮಾನ ಕೈಗೊಳ್ಳುವ ಪರಮಾಧಿಕಾರ ಅವರಿಗೆ ಮಾತ್ರ ಎಂದಿದ್ದಾರೆ.
ಆಡಳಿತ ಮಂಡಳಿ ಸಭೆಗೆ ಸಂಬಂಧಿಸಿದ ಕಡತಗಳನ್ನು ಮಾತ್ರ ಅಧ್ಯಕ್ಷರು ಕೇಳಬಹುದು. ಆಯುಕ್ತನಾಗಿ ಕಾಯ್ದೆಗೆ ವಿರುದ್ಧವಾಗಿ ಅಧಿಕಾರ ಬಳಸಲು ಸಾಧ್ಯವಿಲ್ಲ. ಎಲ್ಲ ಕಡತಗಳನ್ನು ಅವರಿಗೆ ಕಳುಹಿಸಲು ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
key words : BDA scam-President-S.R.Vishwanath-Commissioner-H.R.Mahadev-Cold-War