ಬೆಂಗಳೂರು,ಆ,13,2020(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಎರಡನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, 68.12 ಕೋಟಿ ರೂ. ಗಳಿಕೆ ಮಾಡಿದೆ.
ಬಿಡಿಎ ಎರಡನೇ ಹಂತದಲ್ಲಿ ವಿವಿಧ ಬಡಾವಣೆಗಳ 308 ನಿವೇಶನಗಳನ್ನು ಹರಾಜಿಗಿಡಲಾಗಿತ್ತು. ದಿನಾಂಕ 20.07.2020ರಂದು ಪ್ರಾರಂಭಗೊಂಡ ಇ-ಹರಾಜಿನಲ್ಲಿ ಸುಮಾರು 1601 ಬಿಡ್ಡುದಾರರು ಭಾಗವಹಿಸಿದ್ದಾರೆ. 308 ನಿವೇಶನಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ.
308 ನಿವೇಶನಗಳನ್ನು ಹರಾಜಿಗಿಡಲಾಗಿತ್ತು. ಇವುಗಳಲ್ಲಿ 240 ನಿವೇಶನಗಳು ಮಾರಾಟವಾಗಿವೆ. ಹರಾಜಿನಲ್ಲಿ ಸುಮಾರು 1601 ಬಿಡ್ಡುದಾರರು ಭಾಗವಹಿಸಿದ್ದು, ನಿವೇಶನಗಳ ಮೂಲಬೆಲೆ 103.87 ಕೋಟಿಯಾಗಿದೆ. ಹರಾಜು ಮೌಲ್ಯ 171.99 ಕೋಟಿ, ಗಳಿಕೆ , 68.12 ಕೋಟಿ ರೂ ಆಗಿದೆ.
ಇ-ಹರಾಜಿಗೆ ಸಂಬಂಧಿಸಿದಂತೆ, ಮೂರನೇ ಹಂತದ ಅಧಿಸೂಚನೆಯನ್ನು ಹೊರಡಿಸಲು ಸಿದ್ಧತೆಗಳಾಗಿದ್ದು, ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಬಿಡಿಎ ತಿಳಿಸಿದೆ.
Key words: BDA –site- E-auction-Locations-income