ಹುಬ್ಬಳ್ಳಿ,ಅ,26,2019(www.justkannada.in): ನಾನು 8 ಬಾರಿ ಶಾಸಕನಾಗಿದ್ದೇನೆ: ಸಿಎಂ ಆಗೋದ್ರಲ್ಲಿ ತಪ್ಪೇನಿದೆ..? ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ತಾವು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಶಾಸಕ ಉಮೇಶ್ ಕತ್ತಿ, ಡಿಸಿಎಂ ಹುದ್ದೆ ಸಾಂವಿಧಾನಿಕ ಹುದ್ದೆ ಅಲ್ಲ. ಹೀಗಾಗಿ ನಾನು ಡಿಸಿಎಂ ಆಗಲ್ಲ. ಸಿಎಂ ಆಗ್ತೇನೆ. ಸಿಎಂ ಯಡಿಯೂರಪ್ಪ ಅವರ ಅವಧಿ ಮುಗಿದ ಮೇಲೆ ಸಿಎಂ ಆಗುತ್ತೇನೆ. ಮುಂದಿನ ದಿನಗಳಲ್ಲಿ ಬದಲಾವಣೆ ಆಗಬಹುದು ಆಗುತ್ತೆ ಎಂದು ನುಡಿದರು.
ನಾನು ಏಕಾಂಗಿ ಅಲ್ಲ. ನನ್ನ ಜತೆ ಬಹಳ ಜನರಿದ್ದಾರೆ ಎಂದು ಹೇಳಿದ ಶಾಸಕ ಉಮೇಶ್ ಕತ್ತಿ, ಸಿಎಂ ಬಿಎಸ್ ಯಡಿಯೂರಪ್ಪ ನಮ್ಮ ನಾಯಕ. ಡಿಸಿಎಂ ಲಕ್ಷ್ಮಣ ಸವದಿ ಆತ್ಮೀಯ ಮಿತ್ರ. ಅನರ್ಹ ಶಾಸಕರ ಬಗ್ಗೆ ಲಕ್ಷ್ಮಣ್ ಸವದಿ ಹಗುರವಾಗಿ ಮಾತನಾಡಿದ್ದರು. ಹೀಗಾಗಿ ಉತ್ತರ ಕೊಟ್ಟಿದ್ದೇನೆ ಅದರಲ್ಲಿ ತಪ್ಪೇನಿದೆ. ಅನರ್ಹ ಶಾಸಕರು ರಾಜೀನಾಮೆ ನೀಡಿದ್ದಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಪುನರುಚ್ಛರಿಸಿದರು.
Key words: Become -CM –not wrong – hubli-BJP MLA- umesh katti