ಮೈಸೂರು,ಜನವರಿ,1,2021(www.justkannada.in): ಬ್ರಿಟನ್ ಕೊರೋನಾ ರೂಪಾಂತರ ಹರಡುತ್ತಿರುವ ಮಧ್ಯೆ ರಾಜ್ಯದಲ್ಲಿ ಇಂದಿನಿಂದ ಶಾಲಾ –ಕಾಲೇಜುಗಳು ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿದ್ಯಾರ್ಥಿಗಳು ಉತ್ಸಾಹದಿಂದಲೇ ಕಾಲೇಜಿಗೆ ಆಗಮಿಸುತ್ತಿದ್ದು, ಮೈಸೂರಿನ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೇ 40 ರಷ್ಟು ಹಾಜರಾತಿ ಕಂಡು ಬಂದಿದೆ. ಕಾಲೇಜು ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರದಲ್ಲಿ ತರಗತಿ ಆರಂಭ ಮಾಡಲಾಗುತ್ತಿದೆ.
ಕಳೆದ 10 ತಿಂಗಳ ನಂತರ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದು, ನೆಚ್ವಿನ ವಿದ್ಯಾರ್ಥಿಗಳನ್ನು ಕಂಡು ಅಧ್ಯಾಪಕರು ಸಂಭ್ರಮಿಸಿದರು. ಹತ್ತು ತಿಂಗಳ ನಂತರ ನಮ್ಮ ಮಕ್ಕಳನ್ನು ನೋಡಿ ತುಂಬಾ ಖುಷಿಯಾಗಿದೆ. ಮಕ್ಕಳು ಸಾಕಷ್ಟು ಖುಷಿಯಿಂದ ಇದ್ದಾರೆ. ಏನನ್ನೊ ಕಳೆದ್ದು ಕೊಂಡಿದ್ದನ್ನ ಮತ್ತೆ ಪಡೆದಷ್ಟು ಸಂತೋಷ ಮಕ್ಕಳಿಗೆ ಇದೆ. ನಮಗೂ ನಮ್ಮ ಮಕ್ಕಳನ್ನೇ ನೋಡಿದಷ್ಟು ಸಂತೋಷ ಆಗುತ್ತಿದೆ. ಆನ್ ಲೈನ್ ಕ್ಲಾಸ್ ಅಷ್ಟು ಪರಿಣಾಮಕಾರಿ ಅಲ್ಲ. ಮಕ್ಕಳ ಜೊತೆ ನೇರವಾಗಿ ಪಾಠ ಮಾಡುವ ಅನುಭವೆವೇ ಬೇರೆ ಎಂದು ಅಧ್ಯಾಪಕರು ಅಭಿಪ್ರಾಯ ಹಂಚಿಕೊಂಡರು.
ಆಧ್ಯಾಪಕ ವರ್ಗವನ್ನು ಹೂಗುಚ್ಚ ನೀಡಿ ಸ್ವಾಗತಿಸಿದ ಪ್ರಾಂಶುಪಾಲ ಸೋಮಣ್ಣ…
ಇಂದಿನಿಂದ ತರಗತಿ ಆರಂಭವಾದ ಹಿನ್ನೆಲೆ. ಮೈಸೂರು ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೆ ಹೊಸವರ್ಷದ ಶುಭಾಶಯದೊಂದಿಗೆ ಶಾಲಾ ಆಡಳಿತ ಮಂಡಳಿ ಸ್ವಾಗತ ನೀಡಿತು. ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಆಧ್ಯಾಪಕ ವರ್ಗವನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಮಧ್ಯೆ ಪ್ರಾಧ್ಯಾಪಕರು ಉತ್ಸಾಹದಿಂದಲೇ ಮಕ್ಕಳೊಡನೆ ಬೆರೆತರು.
ENGLISH SUMMARY….
Schools and colleges begin: Good response from students in Mysuru
Mysuru, Jan. 01, 2020 (www.justkannada.in): Schools and Colleges started today in the cultural capital of the State Mysuru, amidst the fear of spreading the Britain Corona variant.
Classes for SSLC and 2nd PUC commenced today, and there has been a good response from the students. The illustrious Maharani Government PU College in Mysuru, registered 40% attendance on the first day today. Thermal screening and usage of sanitizer have been made mandatory for students as well as teachers in all the schools and colleges.
Keywords: Schools and colleges begin in Mysuru/ good response from students
Key words: beginning -school –college-good- response – students – Mysore.