ಬೆಂಗಳೂರು,ಏಪ್ರಿಲ್,04,2021(www.justkannada.in) : ನಮಗೆ ಆರಂಭದಿಂದಲೂ ಎಸ್‌ಐಟಿ ಬಗ್ಗೆ ಅನುಮಾನವಿದೆ. ಇಂತಹ ಅನುಮಾನವನ್ನೇ ಸಂತ್ರಸ್ತ ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಕೆ ಕಮೀಷನರ್ ಗೆ ಬರೆದಿರುವಂತ ಪತ್ರದಲ್ಲಿನ ಅಂಶಗಳು ಸರಿಯಾಗಿಯೇ ಇದೆ ಎಂದು ವಕೀಲ ಜಗದೀಶ್ ಹೇಳಿದ್ದಾರೆ.ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮೀಷನರ್ ಕಮಲ್ ಪಂತ್ ಅವರಿಗೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಸಂತ್ರಸ್ತ ಯುವತಿ ಬರೆದಿರುವ ಸುಧೀರ್ಘ ಪತ್ರ ಕುರಿತು ಅವರು ಮಾತನಾಡಿದರು.
ಆಕೆ ಹೇಳಬೇಕಾದಂತ ಎಲ್ಲಾ ಹೇಳಿಕೆಯನ್ನು ಹೇಳಿದ್ದಾಳೆ. ನಮ್ಮ ಕಕ್ಷಿದಾರಳನ್ನು ವಿಚಾರಣೆಗೆ ಒಳಪಡಿಸುತ್ತಿರುವಂತ ಎಸ್‌ಐಟಿ ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಮಾತ್ರ ಯಾಕೆ ವಿಚಾರಣೆಗೆ ಒಳಪಡಿಸುತ್ತಿಲ್ಲ ಎಂದಿದ್ದಾರೆ.
ಬೇರೆ ಯಾವುದೇ ಸಾಮಾನ್ಯ ಜನರಾಗಿದ್ದರೇ ಇಷ್ಟು ಹೊತ್ತಿಗೆ ಪೊಲೀಸರು ಬಂಧಿಸುತ್ತಿರಲಿಲ್ಲವೇ? ಆರೋಪಿಯನ್ನು ಹೊರಗೆ ಓಡಾಡೋದಕ್ಕೆ ಬಿಟ್ಟಿರೋದು ಯಾಕೆ? ಇದು ಷಡ್ಯಂತ್ರವಾಗಿದೆ. ಸರಿಯಾದ ರೀತಿಯಲ್ಲಿ ಎಸ್ ಐಟಿ ತನಿಖೆ ನಡೆಸಲಿ ಎಂಬುದಾಗಿ ಒತ್ತಾಯಿಸಿದರು.
key words : beginning-SIT-About-Doubt-lawyer-Jagdish