ಬೆಂಗಳೂರು,ನವೆಂಬರ್,04,2020(www.justkannada.in) : ಸಂವಿಧಾನದ ಸಿನಿ ಕಂಬೈನ್ಸ್ ಬ್ಯಾನರ್ ನ ಅಡಿಯಲ್ಲಿ ‘ಗುಲಾಮಗಿರಿ’(ಆಳುವ ಮತ್ತು ದುಡಿಯುವ ವರ್ಗಗಳ ನಡುವಿನ ಸಂಘರ್ಷ) ಹೆಸರಿನಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಟೈಗರ್ ನಾಗ್ ಅವರು ಸಿನಿಮಾದ ಕಥೆ-ಚಿತ್ರಕಥೆ, ನಿರ್ದೇಶನ ಮಾಡುತ್ತಿದ್ದು, ಎ.ಅರ್.ಸಾಯಿರಾಮ್ ಅವರು ಸಂಭಾಷಣೆ ಹಾಗೂ ಶ್ರೀಮಂಜುಮಹದೇವ್ ಸಂಗೀತ ನೀಡಿದ್ದಾರೆ. ಚಿತ್ರದ ಒಂದು ಹಂತದ ಮಾತಿನ ಚಿತ್ರೀಕರಣ ಮುಗಿದ್ದಿದ್ದು, ಎರಡನೇ. ಹಂತ ಚಿತ್ರೀಕರಣ ಶುರುವಾಗಿದೆ.
ನಾಯಕರಾಗಿ ಟೈಗರ್ ನಾಗ್, ನಾಯಕಿಯಾಗಿ ಭವ್ಯ ಶ್ರೀ, ಎರಡನೇ ನಾಯಕಿಯಾಗಿ ನಿವೇದಿತ ಹಾಗೂ ಹಿರಿಯ ನಟ, ನಟಿಯರು ಅಭಿನಯಸುತ್ತಿದ್ದಾರೆ ಚಿತ್ರತಂಡ ತಿಳಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಸುತ್ತಮುತ್ತ ಚಿತ್ರಿಸಲಾಗುತ್ತಿದೆ. ಶೀಘ್ರರವೇ ಮೂರು ಭಾಷೆಗಳಲ್ಲಿ ಆಡಿಯೋ ಬಿಡುಗಡೆ ಮಾಡಲು. ಚಿತ್ರತಂಡ ಸಿದ್ಧತೆ ನಡೆಸಿದೆ.
key words : being-produced-three-languages-Causes-image-slavery