ಬೆಳಗಾವಿ,ಸೆ,20,2019(www.justkannada.in): ನೆರೆ ಪರಿಹಾರ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಬೃಹತ್ ಮತ್ತು ಸಣ್ಣ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಉಸ್ತುವಾರಿ ಸಚಿವರೂ ಆದ ಜಗದೀಶ್ ಶೆಟ್ಟರ್ ಕಾರಿಗೆ ಡಿ.ಸಿ ಕಚೇರಿ ಮುಂಭಾಗ ರೈತರು ಘೇರಾವ್ ಹಾಕಿ ಶೇಮ್ ಶೇಮ್ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ನೆರೆ ಪರಿಹಾರದ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ಮುತ್ತಿಗೆ ಹಾಕಿದ್ದರು ಎನ್ನಲಾಗಿದೆ.
ಘೇರಾವ್ ಹಾಕಿದ ರೈತರನ್ನ ಪೊಲೀಸರು ತೆರವುಗೊಳಿಸಿದ್ದು ರೈತರನ್ನ ತಡೆಯಲು ಪೊಲೀಸರು ಹರಸಾಹಸ ಪಟ್ಟರು. ನಂತರ ಡಿ.ಸಿ ಕಚೇರಿ ಮುಂದೆ ರೈತರು ಧರಣಿ ನಡೆಸಿದರು.
ಇನ್ನು ಚಳಿಗಾಲದ ಅಧಿವೇಶನವನ್ನ ಬೆಳಗಾವಿಯಲ್ಲೇ ನಡೆಸಬೇಕು ಎಂದು ರೈತರು ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಟ್ಟು ಹಿಡಿದರು. ಬೆಳಗಾವಿಯಲ್ಲಿ ನೆರೆ ಹಾವಳಿಯಿಂದ ಅಪಾರ ನಷ್ಟ ಹಿನ್ನೆಲೆ ಈ ಬಾರಿ ಚಳಿಗಾಲದ ಅಧಿವೇಶನವನ್ನ ಬೆಂಗಳೂರಿನಲ್ಲಿ ಮಾಡಲು ಸರ್ಕಾರ ನಿರ್ಧರಿಸಿದೆ.
Key words: belagavi-Farmers – Gherav-Minister Jagdish Shettar- car-shame Government