ಚಿತ್ರದುರ್ಗ,ಫೆ,6,2020(www.justkannada.in): ಇಂದು ಸಚಿವ ಸಂಪುಟ ವಿಸ್ತರಣೆಯಾಗಿ 10 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಸಿಎಂ ಬಿಎಸ್ ವೈ ಸಂಪುಟದಲ್ಲಿ ಬೆಳಗಾವಿ ಬೆಂಗಳೂರಿಗೆ ಅರ್ಧದಷ್ಟು ಸ್ಥಾನ ಲಭಿಸಿದೆ. ಈ ಸಂಬಂಧ ಉಳಿದ ಜಿಲ್ಲೆಗಳನ್ನ ಕಡೆಗಣಿಸಲಾಗಿದೆ ಎಂದು ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿಗೆ ಅರ್ಧದಷ್ಟು ಸ್ಥಾನ ನೀಡಲಾಗಿದೆ. ಈ ಮೂಲಕ ಉಳಿದ ಜಿಲ್ಲೆಗಳನ್ನ ಕಡೆಗಣಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಮಂತ್ರಿ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನವಿದೆ. ನಾನು ಹಿರಿಯ ಬಿಜೆಪಿ ಶಾಸಕ, ನಮಗೂ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ ತಿಪ್ಪಾರೆಡ್ಡಿ, ಮೂರು ನಾಲ್ಕು ಬಾರಿ ಸಚಿವರಾದವರನ್ನ ಪಕ್ಷ ಸಂಘಟನೆಗೆ ಬಳಸಿಕೊಳ್ಳಿ. ಹೊಸಬರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
ಮೂಲಬಿಜೆಪಿಗರಿಗೆ ಸಚಿವ ಸ್ಥಾನ ನೀಡುವ ವದಂತಿ ಇತ್ತು. ಆದರೆ ಅದನ್ನ ಮುಂದೂಡಿಕೆ ಮಾಡಿದ್ದು ಒಳ್ಳೆಯದ್ದೇ ಆಯಿತು ಎಂದು ತಿಪ್ಪಾರೆಡ್ಡಿ ಹೇಳಿದರು.
Key words: Belgaum- Bangalore-cabinet- BJP MLA- GH Thippareddi – displeasure