ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಗೆ ಮುಖಭಂಗ: ಸ್ಪಷ್ಟ ಬಹುಮತ ಪಡೆದು ಇತಿಹಾಸ ಸೃಷ್ಟಿಸಿದ ಬಿಜೆಪಿ.

ಬೆಳಗಾವಿ,ಸೆಪ್ಟಂಬರ್,6,2021(www.justkannada.in):  ಸೆಪ್ಟಂಬರ್ 3 ರಂದು ನಡೆದ ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಇತಿಹಾಸ ಸೃಷ್ಟಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಮತ ಎಣಿಕೆ ಅಂತ್ಯವಾಗಿದ್ದು,  ಸ್ಪಷ್ಟ ಬಹುಮತ ಪಡೆದ ಬಿಜೆಪಿ ಅಧಿಕಾರದ ಗದ್ದುಗೆಗೇರಲು ಸಿದ್ದವಾಗಿದೆ.  25 ವರ್ಷದ ಬಳಿಕ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆಗಿಳಿದಿದ್ದ ಬಿಜೆಪಿ ಒಟ್ಟು 36 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ ಗೆ 9, ಪಕ್ಷೇತರ 5, ಎಂಇಎಸ್ 2, ಎಂಐಎಂ 1 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಈ ಮೂಲಕ ಮೇಯರ್ ಸ್ಥಾನದ ಮ್ಯಾಜಿಕ್ ನಂಬರ್‌ ದಾಟಿದ ಬಿಜೆಪಿ ಇದೇ ಮೊದಲ ಬಾರಿಗೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಈ ಮೂಲಕ  ಎಂಇಎಸ್‌ಗೆ ಭಾರೀ ಮುಖಭಂಗವಾಗಿದೆ.

ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತದತ್ತ ದಾಪುಗಾಲು ಇಟ್ಟಿದೆ. ಇಲ್ಲಿಯವರೆಗೂ 30 ವಾಡ್೯ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ ನ 17 ಅಭ್ಯರ್ಥಿಗಳು, ಪಕ್ಷೇತರರಾದ 05 ಮಂದಿ ಗೆಲುವು ಸಾಧಿಸಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಹಿನ್ನೆಲೆಯಲ್ಲಿ ಪಾಲಿಕೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬೆಂಗಳೂರಿನಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಕಲಬುರಗಿ ಚುನಾವಣಾ ಉಸ್ತುವಾರಿ ಆಗಿದ್ದ ಈಶ್ವರ್ ಖಂಡ್ರೆ ಹಾಗೂ ಕಲಬುರಗಿ ಜಿಲ್ಲೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ENGLISH SUMMARY…

MES loses in Belagavi Corporation elections: BJP creates history by getting absolute majority
Belagavi, September 6, 2021 (www.justkannada.in): Elections for the three City Corporations of the State were held on September 3, and the results were to be announced today. The BJP has created history in Belagavi City Corporation election by winning with an absolute majority.
The counting of the Belagavi City Corporation elections is completed and the BJP is all set to take over the power. BJP is successful in winning 36 seats, followed by Congress 9, Independent 9, MES 2, and MIM 1. Thus, the BJP has crossed the magic number to get the Mayor’s seat for the first time in Belagavi, causing humiliation to the MES.
The BJP is also leading in the Hubballi-Dharwad City Corporation elections. It has won in30 wards as of now, followed by Congress 17, independent 5.
However, Congress is leading in the Kalaburagi City Corporation elections. Congress leaders Eshwar Khandre and Cittapur MLA Priyank Kharge met D.K. Shivakumar at his Bengaluru residence today to plan a strategy to gain power in the Kalaburagi City Corporation.
Keywords: City Corporation elections/ Hubballi-Dharwad/ Belagavi/ Kalaburagi/ BJP/ Congress

Key words:  Belgavi–city corporation-BJP -clear -majority.