ಬೆಳಗಾವಿ,ಜನವರಿ,1,2022(www.justkannada.in): ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿಯನ್ನ ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್, ಎಂಇಎಸ್ನ ಮುಖಂಡ ಶುಭಂ ಶೆಳ್ಕೆ ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಆರೋಪಿಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ದೊಂಬಿ, ಗಲಾಟೆ ಮಾಡಿದ್ದಾರೆ. ಸಮಾಜಘಾತುಕ ಕೃತ್ಯವೆಸಗಿದ್ದು ಜಾಮೀನಿಗೆ ಅರ್ಹರಲ್ಲ. ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನದ ಗಂಭೀರ ಆರೋಪ ಇದೆ ಎಂದು ವಾದ ಮಾಡಲಾಗಿದೆ.
ಹೀಗಾಗಿ ಸದ್ಯ ನ್ಯಾಯಾಧೀಶ ಹೇಮಂತ ಕುಮಾರ್ ರಿಂದ ಎಂಇಎಸ್ ಪುಂಡರ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಇನ್ನು 22 ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದರು. 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯೂ ಕೂಡ ವಜಾ ಆಗಿದ್ದು, 11 ಮಂದಿ ತಲೆ ಆರೋಪಿಗಳು ಮರಿಸಿಕೊಂಡಿದ್ದಾರೆ.
Key words: belgavi- Damage – statue -Sangolli Rayanna-case-Bail plea –dismissed- 38 accused