ಬೆಳಗಾವಿ,ಫೆಬ್ರವರಿ,27,2023(www.justkannada.in): ಛತ್ತಿಸ್ ಗಢದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತಿದೆ.ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಕೂಡ ಭಾಗಿಯಾಗಿದ್ದರು. ಆದರೆ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ ಸೂಕ್ತ ಗೌರವ ನೀಡಲಿಲ್ಲ. ಕರ್ನಾಟಕ ರಾಜಕಾರಣಿಗಳನ್ನ ಅವಮಾನಿಸುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಚಾಲನೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಿಂದ ನಿಜಲಿಂಗಪ್ಪ ವಿರೇಂದ್ರ ಪಾಟೀಲ್ ಗೆ ಅಪಮಾನ . ನಮಗೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಛತ್ತಿಸ್ ಗಡದಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದರೂ ಖರ್ಗೆಗೆ ಸೂಕ್ತ ಗೌರವ ನೀಡಲಿಲ್ಲ ಇದು ತಮ್ಮ ಪಕ್ಷದ ಅಧ್ಯಕ್ಷರಿಗೆ ಕಾಂಗ್ರೆಸ್ ನೀಡುವ ಗೌರವ. ಕರ್ನಾಕಟದ ನಾಯಕರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ . ಕಾಂಗ್ರೆಸ್ ಪರಿವಾರದ ವಿರುದ್ದ ಹೋದರೇ ಅಪಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದ್ರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕದ ವರೆಗೂ ರೈತರನ್ನು ಕಡೆಗಣಿಸಿದ್ದರು. ಪಿಎಂ ಕಿಸಾನ್ ಯೋಜನೆಯಿಂದ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾವಣೆಯಾಗಿದೆ. 50 ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳಾ ರೈತರ ಖಾತೆಗೆ ಜಮೆಯಾಗಿದೆ ಎಂದು ಮೋದಿ ಹೇಳಿದರು.
ರೈತಬಂಧು ಬಿಎಸ್ ಯಡಿಯೂರಪ್ಪ ಸಿರಿಧಾನ್ಯ ಬೆಳೆಗೆ ಸಹಕಾರ ನೀಡಿದರು.
ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ರೈತರಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ರೈತರಿಗೆ ಅನುಕೂಲ. ನೈಸರ್ಗಿಕ ಕೃಷಿ ಪ್ರೋತ್ಸಹಿಸಲು ಆನೇಕ ಕ್ರಮ ಕೈಗೊಳ್ಳಳಾಗಿದೆ. ನಮ್ಮ ಸರ್ಕಾರ ಸಿರಿಧಾನ್ಯ ಬೆಳೆಗೆ ಅನುಕೂಲ ಮಾಡಿಕೊಡುತ್ತೇವೆ. ರೈತಬಂಧು ಬಿಎಸ್ ಯಡಿಯೂರಪ್ಪ ಸಿರಿಧಾನ್ಯ ಬೆಳೆಗೆ ಸಹಕಾರ ನೀಡಿದರು. ಸಿರಿಧಾನ್ಯವನ್ನ ಸೂಪರ್ ಫುಡ್ ಎನ್ನುತ್ತಾರೆ.’ ಸಿರಿಧಾನ್ಯ ಬಳಕೆಗೆ ಡಬಲ್ ಇಂಜಿನ್ ಸರ್ಕಾರ ಒತ್ತು ಕೊಡುತ್ತಿದೆ. ಎಂದರು.
ಬಜೆಟ್ ನಲ್ಲಿ ಕಬ್ಬುಬೆಳೆಗಾರರಿಗೆ ವಿಶೇಷ ಯೋಜನೆ ಘೋಷಿಸಿದ್ದೇವೆ. ಎಥನಾಲ್ ಉತ್ಪಾದನೆಗೂ ಒತ್ತು ನೀಡಿದ್ದೇವೆ. ಕಬ್ಬು ಬೆಳೆಗಾರರಿಗೆ ವಿಪಕ್ಷಗಳು ಏನು ಮಾಡಿರಲಿಲ್ಲ. ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗಾಗಿ ಪಿಎಂ ಪ್ರಮಾಣ್ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕರ್ನಾಟಕದ ರೈಲ್ವೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಹಣ ಮೀಸಲಿಟ್ಟಿದ್ದೇವೆ ಮನೆ ಮನೆಗೂ ಶುದ್ಧ ಕುಡಿಯುವ ನೀರು. ಡಬಲ್ ಇಂಜಿನ್ ಸರ್ಕಾರದಿಂದ ಇವೆಲ್ಲಾ ಸಾಧ್ಯವಾಗಿದೆ. ಕಾಂಗ್ರೆಸ್ ಎಷ್ಟು ನಿರಾಸೆಯಾಗಿದೆ ಅಂದರೇ ನಾನು ಬದುಕಿರೋದೆ ಅವರಿಗೆ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಡಿದರು. .
ನವ ಭಾರತ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ದೊಡ್ಡದಿದೆ. ಕೃಷಿಕ್ಷೇತ್ರವನ್ನ ಆಧುನಿಕತೆಯೊಂದಿಗೆ ಜೋಡಿಸುತ್ತಿದ್ದೇವೆ. ಕೃಷಿಯಲ್ಲಿ 2014ರ ನಂತರ ಸಾರ್ಥಕ ಬದಲಾವಣೆಯಾಗಿದೆ. ಭಾರತದ ಭವಿಷ್ಯದ ದೃಷ್ಠಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದರು.
Key words: belgavi-PM –Narendra modi-innuagrate-Kishan Samman-farmer