ಬೆಂಗಳೂರು,ಫೆ,12,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ, ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದರೇ ಬಂದ್ ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಾಳೆ ಬಂದ್ ಇದ್ದರೂ ಶಾಲಾ-ಕಾಲೇಜು, ವಾಹನ ಸಂಚಾರ ಎಂದಿನಂತೆ ಇರುತ್ತೆ. ಹಾಲು, ಪೇಪರ್ ಮಾರಾಟ ಯಥಾಸ್ಥಿತಿ ಇರುತ್ತೆ. ಬಂದ್ ಗೆ ಕರೆ ನೀಡಿರುವವರ ಪಟ್ಟಿ ನನ್ನ ಬಳಿ ಇದೆ. ನಾಳೆ ಬಂದ್ ವೇಳೆ ಸಾರ್ವಜನುಕ ಆಸ್ತಿಪಾಸ್ತಿ ನಷ್ಟವಾದರೇ ಆಯೋಜಕರ ಮೇಲೆ ಕಠಿಣಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕರ್ನಾಟಕ ಬಂದ್ ಗೆ ಪೊಲೀಸರು ಅನುಮತಿ ನೀಡಿಲ್ಲ. ನಾಳೆ ಬೇರೆ ಕಡೆ ಮೆರವಣಿಗೆ,ಪ್ರತಿಭಟನೆ ಅವಕಾಶವಿಲ್ಲ. ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದರು.
Key words: Bengaluru City -Police Commissioner- Bhaskar Rao-warns – public- property- damage -bandh