ಬೆಂಗಳೂರು, ಮಾ.೨೫, ೨೦೨೪ : ನಗರದಲ್ಲಿ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, 15 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಐಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ,
ಇದಕ್ಕೆ ತಜ್ಞರು ಸಹಮತ ವ್ಯಕ್ತಪಡಿಸಿದ್ದು, ಇದರಿಂದ ನಗರದಲ್ಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಿದ್ದಾರೆ.
ಪ್ರತಿ ನಿತ್ಯ ೫೦೦ ಮಿಲಿಯನ್ ಲೀಟರ್ ಕೊರತೆ :
2,600 MLD ಗಳ ಅವಶ್ಯಕತೆಯ ವಿರುದ್ಧ ಬೆಂಗಳೂರು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ (MLD) ಕೊರತೆಯನ್ನು ಎದುರಿಸುತ್ತಿರುವ ಕಾರಣ ಈ ಬೆಳವಣಿಗೆಯಾಗಿದೆ.
ಆದ್ದರಿಂದ ನೀರಿನ ಬಿಕ್ಕಟ್ಟು ಶಮನಗೊಳ್ಳುವ ತನಕ ಮನೆಯಿಂದಲೇ ಕೆಲಸ ಮಾಡಲು ಪ್ರೋತ್ಸಾಹಿಸುವಂತೆ ತಜ್ಞರು ಸರಕಾರವನ್ನು ಒತ್ತಾಯಿಸಿದ್ದಾರೆ.
ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದರಿಂದ ಸುಮಾರು 10 ಲಕ್ಷ ಜನರು ತಮ್ಮ ಊರುಗಳಿಗೆ ಮರಳಬಹುದು, ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡ ಕಡಿಮೆ ಮಾಡಬಹುದು ಎನ್ನಲಾಗಿದೆ.
1980 ರ ದಶಕದಲ್ಲಿ, ನಗರದ ಜನಸಂಖ್ಯೆಯು 25 ರಿಂದ 30 ಲಕ್ಷದ ನಡುವೆ ಇತ್ತು, ಆದರೆ ಈಗ ಅದು 1.5 ಕೋಟಿಗೆ ಏರಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯವು 2003-04ರಲ್ಲಿ ಮೂರು ವರ್ಷಗಳ ಬರಗಾಲವನ್ನು ಎದುರಿಸುತ್ತಿದ್ದರೂ ಸಹ, ಆ ಸಮಯದಲ್ಲಿ ಕಡಿಮೆ ಜನಸಾಂದ್ರತೆಯ ಕಾರಣದಿಂದಾಗಿ ಪರಿಣಾಮವು ತೀವ್ರವಾಗಿರಲಿಲ್ಲ. ಕೆರೆಗಳ ಹೂಳು ತೆಗೆಯುವಂಥ ಕ್ರಮಗಳನ್ನು ಕಾಲಕಾಲಕ್ಕೆ ಕೈಗೆತ್ತಿಕೊಳ್ಳುವ ಪ್ರಾಮುಖ್ಯತೆ ಇದರಿಂದ ಮುನ್ನಲೆಗೆ ಬಂದಿದೆ.
ಕಾವೇರಿ ನೀರನ್ನು ಅನಗತ್ಯ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ನಗರದ ಒಟ್ಟು 22 ಕುಟುಂಬಗಳಿಗೆ ತಲಾ 5,000 ರೂಪಾಯಿ ದಂಡ ವಿಧಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 22 ಕುಟುಂಬಗಳಿಂದ ಒಟ್ಟು 1.1 ಲಕ್ಷ ರೂಪಾಯಿಗಳನ್ನು ದಂಡ ಸಂಗ್ರಹಿಸಿದೆ.
ಕುಡಿಯುವ ನೀರು ಅನ್ಯಕಾರ್ಯಕ್ಕೆ, ೨೨ ಕುಟುಂಬಕ್ಕೆ ದಂಡ
ಸಾಮಾಜಿಕ ಮಾಧ್ಯಮಗಳ ಮೂಲಕ ಸ್ವೀಕರಿಸಿದ ದೂರುಗಳ ಮೇಲೆ BWSSB ಕಾರ್ಯನಿರ್ವಹಿಸಿ ಈ ಕ್ರಮ ಜರುಗಿಸಿದೆ. ಜನರು ಕಾರುಗಳು, ಉದ್ಯಾನವನ ಮತ್ತು ಇತರ ತಪ್ಪಿಸಬಹುದಾದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಜಲಮಂಡಳಿಗೆ ದೂರು ನೀಡಲಾಗಿತ್ತು.
key words: Bengaluru Water Crisis ̲ IT Employees ̲ Demand ̲ Work From Home ̲ Experts Say ̲ Reduce Stress On City